ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಹಾಗೂ ಚೇತನಾ ಆಸ್ಪತ್ರೆ ಇವರ ಜಂಟಿ ಸಹಭಾಗಿತ್ವದಲ್ಲಿ ಪ್ರತಿ ತಿಂಗಳ ಎರಡನೇ, ಮೂರನೇ, ಕೊನೆಯ ಮಂಗಳವಾರದಂದು ನಡೆಯುವ ಉಚಿತ ಮಧುಮೇಹ, ರಕ್ತದೊತ್ತಡ ಪರೀಕ್ಷೆ ಹಾಗೂ ಪ್ರತಿ ತಿಂಗಳ ಎರಡನೇ ಮಂಗಳವಾರದಂದು ಉಚಿತ ಸ್ಪೈರೋಮೆಟ್ರಿ, ಅಸ್ತಮಾ ಪರೀಕ್ಷೆ ನಡೆಯುತ್ತಿದ್ದು ಅದರಂತೆ ಜು.9 ರಂದು ಉಚಿತ ಮಧುಮೇಹ, ರಕ್ತದೊತ್ತಡ, ಸ್ಪೈರೋಮೆಟ್ರಿ, ಅಸ್ತಮಾ ಪರೀಕ್ಷೆ ನಡೆಯಿತು.
ಪರೀಕ್ಷೆಗೆ ಆಗಮಿಸಿದ ಫಲಾನುಭವಿಗಳಿಗೆ ಆಸ್ಪತ್ರೆ ವೈದ್ಯ ಡಾ.ಜೆ.ಸಿ ಅಡಿಗರವರು ಸೂಕ್ತ ಸಲಹೆ ನೀಡಿದರು. ಈ ಸಂದರ್ಭದಲ್ಲಿ ರೋಟರಿ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್, ಕಾರ್ಯದರ್ಶಿ ದಾಮೋದರ್ ಕೆ, ಸಮುದಾಯ ಸೇವಾ ವಿಭಾಗದ ನಿರ್ದೇಶಕ ರಾಜ್ ಗೋಪಾಲ್ ಬಲ್ಲಾಳ್, ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿ, ಪರಮೇಶ್ವರ ಗೌಡ, ಡಾ.ಚಂದ್ರಶೇಖರ ರಾವ್, ಆಸ್ಪತ್ರೆಯ ಮ್ಯಾನೇಜರ್ ನೋಯೆಲ್ ಡಿ’ಸೋಜ ಉಪಸ್ಥಿತರಿದ್ದರು.