ಜು.12: ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯು ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಅರುಣಾ ಚಿತ್ರಮಂದಿರದ ಬಳಿಯ ಹಿಂದೂಸ್ಥಾನ್ ಕಾಂಪ್ಲೆಕ್ಸ್ ನಲ್ಲಿ 2010ರಿಂದ ಕಾರ್ಯಾಚರಿಸುತ್ತಿದ್ದ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯು ಸಂಪೂರ್ಣ ಹವಾನಿಯಂತ್ರಿತದೊಂದಿಗೆ ಜು.12 ರಂದು ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಸ್ವಾಗತ್ ಕಾಂಪ್ಲೆಕ್ಸ್ ನ ನೆಲಮಹಡಿಗೆ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ.
ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯು ಸುಳ್ಯದಲ್ಲೂ ತನ್ನ ಶಾಖೆಯನ್ನು ಹೊಂದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಪ್ರತಿಷ್ಟಿತ ಶಾಲೆ ಮತ್ತು ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಅಬಾಕಸ್ ತರಬೇತಿ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯನ್ನು ಕೂಡ ನೀಡುತ್ತಾ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ.
ಕರ್ನಾಟಕ ಎಜುಕೇಷನಲ್ ಅವಾರ್ಡ್ ಪಡೆದ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯು 2010ರಲ್ಲಿ ಕೇವಲ ಕಂಪ್ಯೂಟರ್ ತರಬೇತಿಯೊಂದಿಗೆ ಪ್ರಾರಂಭಗೊಂಡು, ನಂತರ 2018 ರಲ್ಲಿ ಐ.ಆರ್.ಸಿ.ಎಂ.ಡಿ ಟ್ರೈನಿಂಗ್ ಆಂಡ್ ಡೆವಲಪ್ಮೆಂಟ್ ಸೆಂಟರ್ ಎಂಬ ಸಹ ಸಂಸ್ಥೆಯನ್ನು ಹುಟ್ಟು ಹಾಕಿ ಸರಕಾರಿ ಉದ್ಯೋಗಸ್ಥರಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಪ್ರಾರಂಭಿಸಿ ಅನೇಕ ಮಂದಿಗೆ ಉದ್ಯೋಗವನ್ನು ದೊರಕಿಸಿಕೊಡುವುದರಲ್ಲಿ ಸಫಲವಾಯಿತು.
ತದನಂತರ 2020ರಲ್ಲಿ ಅಬಾಕಸ್ ತರಬೇತಿಯನ್ನು ಅಂದರೆ ಮಕ್ಕಳಿಗೆ ವೇಗವಾಗಿ ಲೆಕ್ಕಗಳನ್ನು ಮಾಡುವ ಕೌಶಲ್ಯದ ಕಲಿಕೆಯನ್ನು ಪರಿಚಯಿಸಿತು. ಅಲ್ಲದೆ ಸರಕಾರಿ ಉದ್ಯೋಗವನ್ನು ಪಡೆಯುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತ ಕಾರ್ಯಗಾರವನ್ನು ಕರ್ನಾಟಕದಾದ್ಯಂತ ಅನೇಕ ವಿದ್ಯಾಸಂಸ್ಥೆಗಳಲ್ಲಿ ಉಚಿತವಾಗಿ ನಡೆಸಿಕೊಂಡು ಬಂದ ಹೆಗ್ಗಳಿಕೆ ಈ ಸಂಸ್ಥೆಗೆ ಸಲ್ಲುತ್ತದೆ.
ಈ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆಯಲಿಚ್ಛಿಸುವವರು ಸ್ಥಳಾಂತರಗೊಂಡ ತನ್ನ ಶಾಖೆಯನ್ನು ಸಂಪರ್ಕಿಸಬಹುದಾಗಿ ಸಂಸ್ಥೆಯ ಮುಖ್ಯಸ್ಥರಾದ ಗಣೇಶ್ ಕೆ ಮತ್ತು ಶ್ರೀಮತಿ ಪ್ರಫುಲ್ಲ ಗಣೇಶ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2023ರಲ್ಲಿ ಪ್ರತಿಷ್ಠಿತ ಕರ್ನಾಟಕ ಎಜ್ಯುಕೇಶನಲ್ ಅವಾರ್ಡ್ ಪಡೆದ ಪುತ್ತೂರಿನ ಈ ಹೆಮ್ಮೆಯ ಸಂಸ್ಥೆಯ ಅಡಿಯಲ್ಲಿ 10000 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಕಂಪ್ಯೂಟರ್ ಕೋರ್ಸ್, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ, ಅಬಾಕಸ್, ವೇದಿಕ್ ಮಾಥ್ಸ್ , ಅಲ್ಲದೇ ಅನೇಕ ಉಚಿತ ಕಾರ್ಯಾಗಾರ ತರಬೇತಿಯನ್ನು ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here