ಪುತ್ತೂರು : ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ರಕೇಶ್ವರಿ ಹಾಗೂ ಪರಿವಾರ ದೈವಗಳ ಸಾನಿಧ್ಯ ದಲ್ಲಿ ಹಿರಿಯರ ಅನುಭವದ ಮೇರೆಗೆ ಕೋಟಿ ಚೆನ್ನಯ ಗರಡಿಯ ಹಿಂಭಾಗದಲ್ಲಿ ದೈವಗಳ ಸಾನಿಧ್ಯ ಹಾಗೂ ನಾಗಬನವಿದೆಯೆಂದು ತಿಳಿದು ಬಂದಿದ್ದು ಆ ಪ್ರಕಾರ ಜ್ಯೋತಿಷ್ಯರಾದ ಪಂಜ ಸತ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ತಾಂಬೂಲ ಪ್ರಶ್ನಾ ಚಿಂತನೆಯ ಪ್ರಕಾರ ಪ್ರಥಮ ಹಂತವಾಗಿ ಜು.9ರಂದು ಬೆಳಿಗ್ಗೆ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಸರ್ಪ ಸಂಸ್ಕಾರ ಆರಂಭಗೊಂಡಿತು. ಜು.12 ರಂದು ಸರ್ಪ ಸಂಸ್ಕಾರ ಮಂಗಳ ಆದ ಬಳಿಕ ಆಶ್ಲೇಷಾ ಪೂಜೆ ನಡೆದು ರಾಮಜಾಲು ಗರಡಿಯಲ್ಲಿ ನಾಗ ಪ್ರತಿಷ್ಠೆ ನಡೆಯಿತು. ರಾತ್ರಿ ಅಘೋರ ಹೋಮ, ದುರ್ಗಾ ಪೂಜೆ ನಡೆದು ಅನ್ನ ಸಂತರ್ಪಣೆ ನಡೆಯಿತು. ಮಧ್ಯಾಹ್ನ ಹಾಗೂ ರಾತ್ರಿ ಸುಮಾರು 800 ಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರಾಮಜಾಲು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು, ಪ್ರಗತಿಪರ ಕೃಷಿಕ ನಾರಾಯಣ ರೈ ಬಾರಿಕೆ, ಪ್ರೇಮ್ ರಾಜ್ ರೈ ಪರ್ಪುಂಜ, ಮಿತ್ರದಾಸ ರೈ ಡೆಕ್ಕಲ, ವಿಠಲ ಗೌಡ ಶಿಬರಿಗುರಿ, ಹೊನ್ನಪ್ಪ ಗೌಡ ಕೋಡಿಬೈಲು, ಹೊನ್ನಪ್ಪ ಗೌಡ ಇಡಿಂಜಿಲ, ಸಾಜ ರಾಧಾಕೃಷ್ಣ ಆಳ್ವ , ಹರೀಶ್ ಬಿಜತ್ರೆ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಮೆಸ್ಕಾಂ ಜೆ.ಇ ರವೀಂದ್ರ, ಒಳಮೊಗ್ರು ಗ್ರಾಪಂ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಪಂಚಾಯತ್ ಸದಸ್ಯರಾದ ಮಹೇಶ್ ರೈ ಕೇರಿ, ಪ್ರದೀಪ್ ಎಸ್, ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಪುರಂದರ ಶೆಟ್ಟಿ ಮುಡಾಲ ಪ್ರವೀಣ್ ಪಲ್ಲತ್ತಾರು, ಸಂಪ್ಯ ಪೊಲೀಸ್ ಠಾಣಾ ಎ.ಎಸ್.ಐ ಪರಮೇಶ್, ಸಿಬ್ಬಂದಿಗಳಾದ ಸತೀಶ್, ಪ್ರವೀಣ್ ರೈ ಪಾಲ್ತಾಡು, ರಾಜೇಶ್ ರೈ ಪರ್ಪುಂಜ, ಅನಿಲ್ ರೈ ಬಾರಿಕೆ, ಸಂದೀಪ್ ರೈ ಗುತ್ತು, ದಿನೇಶ್ ಗೌಡ, ಜೀವನ್ ಅಮೀನ್, ಸುರೇಶ್ ಪೂಜಾರಿ, ಹರೀಶ್ ಆಚಾರ್ಯ, ರಾಜೇಶ್ ಪಿದಪಟ್ಲ, ರಾಕೇಶ್ ರೈ ರಾಜೇಶ್ ಸೇಡಿಗುಂಡಿ, ರಾಧಾಕೃಷ್ಣ ಗೌಡ, ಸುರೇಶ್ ನಾಯಕ್, ಜಗದೀಶ್ ,ಅಶ್ವಿನ್, ಕಿಶನ್, ಕವನ್, ನಿತಿನ್, ಪ್ರಜ್ವಲ್, ಸುಜಿತ್, ನಾಗೇಶ್ ರೈ ,ವಸಂತ ಆಚಾರ್ಯ ,ನಾಗೇಶ್ ಗೌಡ, ವಸಂತ , ಪ್ರಿತೇಶ್, ಯೋಗೀಶ್ ,ರೇಖ ರೈ ,ಪ್ರಮೀಳಾ, ಶ್ರೀಮತಿ, ರಕ್ಷಾ ಸೇರಿದಂತೆ ಹಲವು ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.
ವನ ಸಂಕಲ್ಪದ ಸ್ಥಳದಲ್ಲಿ ಅತೀ ಪುರಾತನದಲ್ಲಿ ವೃಕ್ಷದಡಿ ಕಲ್ಲು ಹಾಕಿ ಆರಾಧಿಸಿ ಬಂದಿರುವ ರಕ್ತಶ್ವರಿ, ಕುಪ್ಪೆಪಂಜುರ್ಲಿ, ಗುಳಿಗೆ ಹಾಗೂ ಭೈರವ ಶಕ್ತಿಗಳು ಆರಾಧನೆಯಿಲ್ಲದೆ ಅದೃಶ್ಯವಾಗಿ ಊರಿಗೇ ಭಾದಕ ಸ್ವರೂಪದಲ್ಲಿರುವುದರಿಂದ ಅನುಜ್ಞಾಕಲಶ ನಡೆಸಿ ಬಾಲಾಲಯ ಮಾಡಿಕೊಳ್ಳಬೇಕು. ನಿಶ್ಚಿತ ಶಿಲ್ಪಿಯನ್ನು ಸ್ಥಳಕ್ಕೆ ಕರೆಸಿಕೊಂಡು ದೈವಗಳಿಗೆ ಶಿಲ್ಪಶಾಸ್ತ್ರ ರೀತ್ಯಾ ಕಟ್ಟೆ ನಿರ್ಮಿಸಿ ಸುತ್ತು ಪರಿಧಿ ಹಾಕಬೇಕು, ಈ ಎಲ್ಲಾ ಕೆಲಸ ಪೂರ್ತಿಕರಿಸಿಕೊಂಡ ನಂತರ ಶುಭಮುಹೂರ್ತದಲ್ಲಿ ಪ್ರತಿಷ್ಠಾ ಕಾರ್ಯ ನಡೆಸಿಕೊಳ್ಳಬೇಕು ಎಂದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ. ಈ ಎಲ್ಲಾ ಕಾರ್ಯಗಳು ಒಂದು ವರ್ಷದೊಳಗೆ ಮುಗಿಯಬೇಕಾಗಿದೆ. ಈ ಎಲ್ಲಾ ಕಾರ್ಯಗಳಿಗೆ ಸುಮಾರು 6 ಲಕ್ಷ ರೂಪಾಯಿ ಖರ್ಚು ಆಗಲಿದೆ ಎಂದು ಅಂದಾಜಿಸಲಾಗಿದೆ. ಇದರ ಪ್ರಥಮ ಹಂತವಾಗಿ ನಾಗಪ್ರತಿಷ್ಠಾ ಕಾರ್ಯ ನಡೆದಿದೆ.