ಪುತ್ತೂರು: ಕಳೆದ 38 ವರ್ಷಗಳಿಂದ ಮುಖ್ಯ ರಸ್ತೆಯ ಬೋನಂತಾಯ ಬಿಲ್ಡಿಂಗ್ ನಲ್ಲಿ ವ್ಯವಹರಿಸುತ್ತಿದ್ದ ಎಸಿ, ರೆಫ್ರೀಜರೇಟರ್, ವಾಷಿಂಗ್ ಮೆಷಿನ್‌ಗಳ ಮಾರಾಟ ಮತ್ತು ಸೇವಾ ಮಳಿಗೆ ಕಾವೇರಿ ಎಂಟರ್ ಪ್ರೈಸಸ್ ಜು.14ರಂದು ಬೊಳುವಾರು ಆಂಜನೇಯ ಮಂತ್ರಾಲಯದ ಬಳಿಯ ಶಿವಗುರು(ಸ್ನೇಹ ಸಿಲ್ಕ್‌ನ ಬಳಿ)ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.
ಸ್ಥಳಾಂತರಗೊಂಡು ಶುಭಾರಂಭಗೊಂಡಿತು.
ಮಳಿಗೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ ಮಾತನಾಡಿ, ವ್ಯವಹಾರ ಹಾಗೂ ಸೇವೆಯಲ್ಲಿ ಗುಣಮಟ್ಟ, ಪಾರದರ್ಶಕತೆ, ಪ್ರಾಮಾಣಿಕತೆ ಇರುವಲ್ಲಿ, ಗ್ರಾಹಕರು ಹುಡುಕಿಕೊಂಡು ಬರುತ್ತಾರೆ. ಎಸಿ,ರೆಫ್ರೀಜರೇಷನ್ ಮಾರಾಟ ಹಾಗೂ ಸೇವೆಯಲ್ಲಿ ಕಳೆದ ನಲವತ್ತು ವರ್ಷಗಳಿಂದ ತೊಡಗಿಸಿಕೊಂಡಿರುವ ಶ್ರೀಕಾಂತ್ ಕೊಳತ್ತಾಯರವರು ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯತೆ ಹೊಂದಿದ್ದಾರೆ. ಗ್ರಾಹಕರಿಗೆ ಬದ್ಧತೆ, ಸಮರ್ಪಣಾ ಮನೋಭಾವದಿಂದ ಸೇವೆ ನೀಡುತ್ತಿದ್ದು ಅವರು ಎಲ್ಲಿ ಹೋದರೂ ಗ್ರಾಹಕರು ಅವರನ್ನು ಹುಡುಕಿಕೊಂಡು ಬರಲಿದ್ದು ಅವರು ಉದ್ಯಮದಲ್ಲಿ ಯಶಸ್ವಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಡಾ. ಶ್ರೀಪತಿ ರಾವ್ ಮಾತನಾಡಿ, ಕೆಲವು ಔಷಧಿಗಳ ಸಂಗ್ರಹಣೆಗೆ ಆಸ್ಪತ್ರೆ, ಮೆಡಿಕಲ್ ಸ್ಟೋರ್‌ಗಳಿಗೆ ರೆಫ್ರೀಜರೇಟರ್‌ಗಳು ದಿನ 24 ಗಂಟೆಯೂ ಕಾರ್ಯನಿರ್ವಹಿಸಬೇಕು. ಆಸ್ಪತ್ರೆ ಹಾಗೂ ಮೆಡಿಕಲ್ ಸ್ಟೋರ್‌ಗಳಿಗೆ ರೆಫ್ರೀಜರೇಟರ್ ಪೂರೈಕೆ ಮಾಡಿದರೆ ಸಾಲದು ಅಲ್ಲಿಗೆ ಸೇವೆಯೂ ಮುಖ್ಯ. ಹೀಗಾಗಿ ಮಾರಾಟದೊಂದಿಗೆ 24 ಗಂಟೆಯೂ ಸೇವೆ ನೀಡಬೇಕಾಗಿದ್ದು ವೈದ್ಯರಂತೆ ರೆಫ್ರೀಜರೇಟರ್, ಎಸಿ ಮಾರಾಟ ಮಳಿಗೆಗೂ 24*7 ಮಾದರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶ್ರೀಕಾಂತ್ ಕೊಳತ್ತಾಯ ಸಂಸ್ಥೆ ಅನಿವಾರ್ಯ ಕಾರಣಗಳಿಂದ ಸ್ಥಳಾಂತರಗೊಂಡರೂ ಹೊಸ ಹುಮ್ಮಸ್ಸಿನೊಂದಿಗೆ ಸೇವೆ ನೀಡಲು ಅನುಕೂಲವಾಗಲಿದೆ ಎಂದರು.
ಹಿರಿಯ ನ್ಯಾಯವಾದಿ ಸುಬ್ರಮಣ್ಯ ಕೊಳತ್ತಾಯ ಮಾತನಾಡಿ, ಬದಲಾವಣೆ ಜಗದ ನಿಯಮ. ಅದಕ್ಕೆ ಒಗ್ಗಿಕೊಂಡು ಮುನ್ನಡೆಯುವುದು ಮುಖ್ಯ. ಪ್ರಾಮಾಣಿಕ ಸೇವೆಗೆ ದೇವರ ಕೃಪೆಯಿರುತ್ತದೆ. ಸ್ಥಳಾಂತರಗೊಂಡ ಉದ್ಯಮದಿಂದ ಜನರಿಗೆ ಉತ್ತಮ ಸೇವೆ ದೊರೆಯಲಿ. ಉದ್ಯಮ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಸಂಸ್ಥೆಯ ಮ್ಹಾಲಕ ಶ್ರೀಕಾಂತ್ ಕೊಳತ್ತಾಯ ಮಾತನಾಡಿ, ತನ್ನ ಚಿಕ್ಕಪ್ಪನ ಪ್ರೇರಣೆ ಹಾಗೂ ಸ್ಪೂರ್ತಿಯಿಂದ ಕಳೆದ 38 ವರ್ಷಗಳ ಹಿಂದೆ ಬೋನಂತಾಯಿ ಬಿಲ್ಡಿಂಗ್‌ನಲ್ಲಿ ಸಂಸ್ಥೆಯನ್ನು ಜು.14ರಂದು ಪ್ರಾರಂಭಿಸಲಾಗಿತ್ತು. ಇದೀಗ ಸಂಸ್ಥೆ ಅನಿವಾರ್ಯ ಕಾರಣಗಳಿಂದ ಸ್ಥಳಾಂತರಗೊಂಡು ಮತ್ತೆ ಅದೇ ಜು.14ರಂದು ಶುಭಾರಂಭಗೊಳ್ಳುತ್ತಿದೆ. ಗ್ರಾಹಕರು ಎಂದಿನಂತೆ ಸಹಕರಿಸುವಂತೆ ಅವರು ವಿನಂತಿಸಿದರು.
38 ವರ್ಷಗಳ ಹಿಂದೆ ಸಂಸ್ಥೆ ಪ್ರಾರಂಭದ ಪ್ರಥಮ ಗ್ರಾಹಕರಾಗಿದ್ದ ಹಾರಕರೆ ವೆಂಕಟ್ರಮಣ ಭಟ್, ಶಿಲ್ಪಾ ಗ್ಯಾಸ್‌ನ ಉಮಾನಾಥ ಪಿ.ಬಿ., ದಿನೇಶ್ ಉಪಾದ್ಯಾಯ, ನ್ಯಾಯವಾದಿಗಳಾದ ಕಿಶೋರ್ ಕೊಳತ್ತಾಯ, ಕೆ.ಆರ್ ಆಚಾರ್ಯ, ಸ್ನೇಹ ಸಿಲ್ಕ್‌ನ ಸತೀಶ್, ಗಿಫ್ಟ್ ಬಝಾರ್‌ನ ಎಂ.ಜಿ ರಫೀಕ್, ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಕೇಶವ ಪೈ, ರೋಟರಿ ಕ್ಲಬ್ ಪುತ್ತೂರು ಇದರ ಕಾರ್ಯದರ್ಶಿ ದಾಮೋದರ, ಸಿಡ್ಕೋ ಸೊಸೈಟಿ ಅಧ್ಯಕ್ಷ ರವೀಂದ್ರನ್, ಸಿವಿಲ್ ಇಂಜಿನಿಯರ್ ಸಂಜಯ್, ರೋಟರಿ ಕ್ಲಬ್ ಪುತ್ತೂರಿನ ಮಾಜಿ ಅಧ್ಯಕ್ಷ ಜೈರಾಜ್ ಭಂಡಾರಿ, ಗಂಗಾಧರ ರೈ, ಸುಧಾ ಇಲೆಕ್ಟ್ರಿಕಲ್ಸ್‌ನ ಬಾಲಕೃಷ್ಣ ಕೊಳತ್ತಾಯ, ಸಾಯ ಎಂಟರ್‌ಪ್ರೈಸಸ್‌ನ ಗೋವಿಂದ ಪ್ರಕಾಶ್ ಸಾಯ, ಸಂಧ್ಯಾ ಸಾಯ, ಮ್ಹಾಲಕರ ಪುತ್ರಿಯರಾದ ಶ್ರೇಯ ಕೊಳತ್ತಾಯ, ಶಾಯರಿ ಕೊಳತ್ತಾಯ, ಸಂಸ್ಥೆಯ ಸಿಬಂದಿಗಳಾದ ಜಯರಾಮ, ವಿಜಯ್, ಉಮೇಶ್, ಸುಧಾಕರ್ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.
ಎಕ್ಸ್‌ಚೇಂಜ್ ಆಫರ್…!
ನಮ್ಮ ಮಳಿಗೆಯಲ್ಲಿ ಹಳೆಯ ವಾಷಿಂಗ್ ಮೆಷಿನ್ ಹಾಗೂ ರೆಫ್ರೀಜರೇಟರ್‌ಗಳನ್ನು ಹೊಸ ವಾಷಿಂಗ್ ಮೆಷಿನ್ ಹಾಗೂ ರೆಫ್ರೀಜರೇಟರ್‌ಗಳೊಂದಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳುವ ವಿಶೇಷ ಕೊಡುಗೆಯಿದ್ದು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.