ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗೊಳಪಟ್ಟ ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಹಾಗೂ ಮಿತ್ರರಿಂದ ನಡೆದ 42ರ ವರ್ಷದ ಸಂಭ್ರಮದ ಪೂರ್ವಭಾವಿ ಸಭೆಯು ಜು.14ರಂದು ಮುಕ್ರಂಪಾಡಿ ಸುಭದ್ರ ಕಲ್ಯಾಣ ಮಂಟಪದಲ್ಲಿ ಜರಗಿತು.
ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಗಣೇಶೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಮುಕ್ರಂಪಾಡಿರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತುತ ವರ್ಷದ ಗಣೇಶೋತ್ಸವ ಆಚರಣೆಯ ಬಗ್ಗೆ ಚರ್ಚಿಸಲಾಯಿತು. ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಪ್ರೀತಂ ಪುತ್ತೂರಾಯರವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಫಿಲೋಮಿನಾ ಪಿಯು ಹಾಗೂ ಪದವಿ ಕಾಲೇಜಿನ ರ‍್ಯಾಂಕ್ ವಿಜೇತ ವಿದ್ಯಾರ್ಥಿ ಮಿತ್ರರಿಗೆ, ಮಂಗಳೂರು ವಿವಿ ಮಟ್ಟದ ಪ್ರಶಸ್ತಿ ವಿಜೇತ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಮ್ಮ ಕಲಾವಿದರು ಮಂಗಳೂರು ಅರ್ಪಿಸುವ ಸುಂದರ ರೈ ಮಂದಾರ, ದೀಪಕ್ ರೈ ಪಾಣಾಜೆ ತಂಡದಿಂದ ಹಾಸ್ಯಮಯ ನಾಟಕ ‘ಅಮ್ಮೆರ್’ ಪ್ರದರ್ಶನಗೊಳ್ಳಲಿದೆ. ಸೆಪ್ಟೆಂಬರ್ ೮ರಂದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಫಿಲೋ ಗಣಪನ ಅದ್ದೂರಿ ಶೋಭಾಯಾತ್ರೆಯು ಪುತ್ತೂರಿನ ಪ್ರಮುಖ ಬೀದಿಯಲ್ಲಿ ಸಂಚರಿಸಿ ಹಾರಾಡಿ ಬಾವಿಯಲ್ಲಿ ಜಲಸ್ತಂಭನ ನಡೆಸಲಾಗುವುದು ಎಂದು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ವಿದ್ಯಾರ್ಥಿ ಮಿತ್ರರಾದ ಸುಕುಮಾರ್, ಅಖಿಲ್ ಸಾಮೆತ್ತಡ್ಕ, ವಿಖೇಶ್, ನಿತೇಶ್, ಪ್ರಜ್ವಲ್, ಹರ್ಷವರ್ಧನ್ ಶೆಟ್ಟಿ, ಗುರುಪ್ರಸಾದ್, ಅನುಶ್ರೀ, ಸಮೃದ್ಧಿ ಶೆಣೈ, ವಿದ್ಯಾರ್ಥಿಗಳಾದ ರಿಶಿಕಾ ರೈ, ಲಿಖೀತಾ ರೈ, ಪ್ರತಿಕ್ಷಾ ಶೆಟ್ಟಿ, ಸಹನಾ ಗೌಡ, ರಚಿತಾ ಆರ್, ಸೃಜನ್, ಸೃಜನ್ ರೈ, ಸುಹಾಸ್ ಪ್ರಭು, ಸುಧೀಂದ್ರ, ಅನ್ವೇಶ್ ರೈ, ಯತೀಶ್, ಶಬರೀಶ್ ರೈ, ಸೃಜನ್ ಕೆ, ಅನ್ವಿತ ರೈ, ನಿಖಿಲ್, ಧನುಷ್, ಸಿಂಚನ್ ಶೆಟ್ಟಿ, ಕ್ರಿಶಿಲ್, ಹವ್ಯಾಸ್ ಯು, ಸುಜೀತ ಶೆಟ್ಟಿ, ವರುಣ್ ಶೆಟ್ಟಿ, ಜಿಶ್ನು ರೈ, ನಿತೀನ್, ಮಹೇಶ ಬಿ, ಸಮರ್ಥ, ಹೇಮಂತ್ ಮತ್ತೀತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.