ರಾಜ್ಯ ಮಟ್ಟದ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

0

ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ ಈ ಸಾಲಿನ ರಾಜ್ಯ ಮಟ್ಟದ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ
ಪರೀಕ್ಷೆಗಳ ವೇಳಾಪಟ್ಟಿ ಪ್ರಕಟಿಸಿದೆ.

ಲಿಖಿತ ಪರೀಕ್ಷೆಗಳು ಜು.27 ಮತ್ತು 28ರಂದು ರಾಜ್ಯದ 18 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಪ್ರಾಯೋಗಿಕ ಪರೀಕ್ಷೆಗಳು ಆಗಸ್ಟ್‌ 16 ರಿಂದ ಆರಂಭವಾಗಲಿದೆ ಎಂದು ವಿವಿ
ಪರೀಕ್ಷಾಂಗ ವಿಭಾಗದ ಪ್ರಕಟಣೆ ತಿಳಿಸಿದೆ.

ಲಿಖಿತ ಪರೀಕ್ಷೆಗಳ ವೇಳಾಪಟ್ಟಿ:
ಜು.27ರಂದು ಹಾಡುಗಾರಿಕೆ, ವಾದ್ಯ ಸಂಗೀತ, ತಾಳವಾದ್ಯ, ನೃತ್ಯದಲ್ಲಿ ಜ್ಯೂನಿಯರ್‌ ವಿಭಾಗದ ‘ಶಾಸ್ತ್ರ ಪತ್ರಿಕೆ’ ಪರೀಕ್ಷೆ ಮಧ್ಯಾಹ್ನ 1ರಿಂದ 3.30ರ ವರೆಗೆ ನಡೆಯಲಿದೆ. ‘ಶ್ರವಣ ಜ್ಞಾನ/ ದೃಶ್ಯ ಜ್ಞಾನ’ ವಿಷಯದಲ್ಲಿ ಜೂನಿಯರ್‌ ವಿಭಾಗದ ಪರೀಕ್ಷೆ ಸಂಜೆ 4ರಿಂದ 4.30ರ ವರೆಗೆ ನಡೆಯಲಿದೆ. ಜು.28ರಂದು ಹಾಡುಗಾರಿಕೆ, ವಾದ್ಯ ಸಂಗೀತ, ತಾಳವಾದ್ಯ, ನೃತ್ಯದಲ್ಲಿ ‘ಶಾಸ್ತ್ರ ಪತ್ರಿಕೆ- 1’ ಸೀನಿಯರ್‌ ವಿದ್ವತ್‌ ಪೂರ್ವ ವಿದ್ವತ್‌ ಅಂತಿಮ ಪರೀಕ್ಷೆಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 12.30ರ ವರೆಗೆ, ‘ಶಾಸ್ತ್ರ ಪತ್ರಿಕೆ- 2’ ಪರೀಕ್ಷೆಗಳು ಮಧ್ಯಾಹ್ನ 1.30ರಿಂದ 4 ಗಂಟೆ ವರೆಗೆ
ನಡೆಯಲಿದೆ.

ಪರೀಕ್ಷಾ ಕೇಂದ್ರಗಳು:
ಕರಾವಳಿಗೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಬಲ್ಮಠ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜು, ಪುತ್ತೂರಿನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆ
ತೆಂಕಿಲ, ಉಡುಪಿಯಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದೆ.

ಆ.16ರಿಂದ ಲಿಖಿತ ಪರೀಕ್ಷೆ:
ಪ್ರಾಯೋಗಿಕ ಪರೀಕ್ಷೆಗಳು ಆ.16ರಿಂದ ನಡೆಯಲಿದೆ. ಲಿಖಿತ ಪರೀಕ್ಷೆಗಳು ನಡೆದ ಕೇಂದ್ರದಲ್ಲಿಯೇ ಜೂನಿಯರ್‌ ಮತ್ತು ಸೀನಿಯರ್‌ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿದೆ. ವಿದ್ವತ್‌ ಪೂರ್ವ ಹಾಗೂ ಅಂತಿಮ ಪ್ರಾಯೋಗಿಕ ಪರೀಕ್ಷೆಗಳು ಮೈಸೂರು, ಬೆಂಗಳೂರು, ಧಾರವಾಡ, ದಾವಣಗೆರೆ ಹಾಗೂ ಮಂಗಳೂರು ವಲಯಗಳಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ.

LEAVE A REPLY

Please enter your comment!
Please enter your name here