ಪುತ್ತೂರು: ಕಥೋಲಿಕ್ ಸಭಾ ಪುತ್ತೂರು ವಲಯದ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಸಭಾಂಗಣದಲ್ಲಿ ಜರಗಿತು.
ಅಧ್ಯಕ್ಷರಾಗಿ ಉಪ್ಪಿನಂಗಡಿ ಬೇರಿಕೆ ನಿವಾಸಿ, ಬೆಳ್ತಂಗಡಿ ತಾಲೂಕಿನ ಬುಳೇರಿಮೊಗ್ರು ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿರುವ ಶ್ರೀಮತಿ ಲವೀನಾ ಪಿಂಟೊರವರು ಪುನರಾಯ್ಕೆಗೊಂಡಿದ್ದಾರೆ. ಕಾರ್ಯದರ್ಶಿಯಾಗಿ ಸಂತ ಫಿಲೋಮಿನಾ ಕಾಲೇಜಿನ ಆಡಳಿತ ಸಿಬ್ಬಂದಿ ಅರುಣ್ ರೆಬೆಲ್ಲೋ ದರ್ಬೆ, ಕೋಶಾಧಿಕಾರಿಯಾಗಿ ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಚರ್ಚ್ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷ ನವೀನ್ ಬ್ರ್ಯಾಗ್ಸ್ ರವರು ಆಯ್ಕೆಯಾಗಿದ್ದಾರೆ.
ಉಳಿದಂತೆ ಉಪಾಧ್ಯಕ್ಷರಾಗಿ ಲ್ಯಾನ್ಸಿ ಮಸ್ಕರೇನ್ಹಸ್ ಸೇಡಿಯಾಪು, ಸಹ ಕಾರ್ಯದರ್ಶಿಯಾಗಿ ಜೆರಾಲ್ಡ್ ಮಸ್ಕರೇನ್ಹಸ್ ಉಪ್ಪಿನಂಗಡಿ, ಸಹ ಕೋಶಾಧಿಕಾರಿಯಾಗಿ ಐಡಾ ಶಾಂತಿ ಲೋಬೊ ಬನ್ನೂರು, ಆಮ್ಚೊ ಸಂದೇಶ್ ಪ್ರತಿನಿಧಿಯಾಗಿ ಗ್ರೇಸಿ ಗೊನ್ಸಾಲ್ವಿಸ್ ಬನ್ನೂರು, ಸ್ತ್ರೀ ಹಿತಾ ಸಂಚಾಲಕರಾಗಿ ಡಿಂಪಲ್ ಫೆರ್ನಾಂಡಿಸ್ ಹಾರಾಡಿ, ರಾಜಕೀಯ್ ಸಂಚಾಲಕರಾಗಿ ಝೇವಿಯರ್ ಡಿ’ಸೋಜ ಕೂರ್ನಡ್ಕ, ಸಮುದಾಯ ಅಭಿವೃದ್ಧಿ ಸಂಚಾಲಕರಾಗಿ ಪ್ಯಾಟ್ರಿಕ್ ಲೋಬೊ ಪುತ್ತೂರು, ಯುವ ಹಿತಾ ಸಂಚಾಲಕರಾಗಿ ವಿ.ಜೆ. ಫೆರ್ನಾಂಡಿಸ್ ದರ್ಬೆ, ನಿಕಟ ಪೂರ್ವ ಅಧ್ಯಕ್ಷರಾಗಿ ಲ್ಯಾನ್ಸಿ ಮಸ್ಕರೇನ್ಹಸ್ ಸಾಮೆತ್ತಡ್ಕರವರು ಆಯ್ಕೆಯಾಗಿದ್ದಾರೆ.ಕಥೋಲಿಕ್ ಸಭಾ ಮಂಗಳೂರು ಕೇಂದ್ರದ ಪ್ರತಿನಿಧಿಗಳಾದ ನೈಜಿಲ್ ಪಿರೇರಾ ಹಾಗೂ ಲ್ಯಾನ್ಸಿ ಡಿ’ಕುನ್ಹಾರವರು ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಕಥೊಲಿಕ್ ಸಭಾ ಪುತ್ತೂರು ವಲಯವು 12 ಚರ್ಚ್ ಗಳಾದ ಪುತ್ತೂರು, ಉಪ್ಪಿನಂಗಡಿ, ಬನ್ನೂರು, ನೆಲ್ಯಾಡಿ, ಕಡಬ, ಕೊಕ್ಕಡ, ಸುಳ್ಯ, ಬೆಳ್ಳಾರೆ, ಮರೀಲು, ನಿಡ್ಪಳ್ಳಿ, ಪಂಜ, ಸಂಪಾಜೆ ಚರ್ಚ್ ಗಳನ್ನೊಳಗೊಂಡಿದೆ.