ಮಾಡನ್ನೂರು ವ್ಯಾಪ್ತಿಯಲ್ಲಿ ಬಿರುಗಾಳಿ ಅಬ್ಬರ-ನೆಲಕ್ಕುರುಳಿದ ಅಡಿಕೆ ಮರಗಳು, ಮನೆಗೆ ಮರ ಬಿದ್ದು ಹಾನಿ

0

ಪುತ್ತೂರು: ಮಾಡನ್ನೂರು ವ್ಯಾಪ್ತಿಯಲ್ಲಿ ಜು.21ರಂದು ಬೀಸಿದ ಬಿರುಗಾಳಿಗೆ ಅಪಾರ ನಷ್ಟ ಸಂಭವಿಸಿದೆ.
ಮಾಡನ್ನೂರು ನೂರುಲ್ ಹುದಾ ವಿದ್ಯಾಸಂಸ್ಥೆಗೆ ಸೇರಿದ ಮತ್ತು ಮಾಡನ್ನೂರು ಮಸೀದಿಗೆ ಸೇರಿದ ಒಟ್ಟು 65 ಅಡಿಕೆ ಮರ ನೆಲಕ್ಕುರುಳಿದೆ. ನೂರುಲ್ ಹುದಾ ಕಟ್ಟಡದ ಮೇಲ್ಭಾಗದಲ್ಲಿ ಅಳವಡಿಸಲಾಗಿದ್ದ ಶಿಟುಗಳು ಗಾಳಿಗೆ ಹಾರಿ ಹೋಗಿದ್ದು ಲೇಬರ್ ಕೊಠಡಿಯ ಮೇಲ್ಛಾವಣಿ ಸಂಪುರ್ಣವಾಗಿ ಕುಸಿದು ಬಿದ್ದಿದ್ದು ಶಿಟುಗಳು ಗಾಲಿಗೆ ಹಾರಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅಂದಾಜು 3 ಲಕ್ಷ ರೂ ನಷ್ಟ ಸಂಭವಿಸಿರುವುದಾಗಿ ತಿಳಿದು ಬಂದಿದೆ.

ಮನೆಗೆ ಮರ ಬಿದ್ದು ಹಾನಿ:
ಮಾಡನ್ನೂರಿನ ಹಮೀದ್ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದ್ದು ಅಪಾರ ನಷ್ಟ ಉಂಟಾಗಿದೆ.

ಸ್ಥಳಕ್ಕೆ ಭೇಟಿ:
ಘಟನಾ ಸ್ಥಳಗಳಿಗೆ ಕಂದಾಯ ನಿರೀಕ್ಷಕ ಗೋಪಿನಾಥ್, ಗ್ರಾಮ ಸಹಾಯಕ ತಿಮ್ಮಪ್ಪ, ಸಿಬ್ಬಂದಿ ಕಬೀರ್, ಅರಿಯಡ್ಕ ಗ್ರಾ.ಪಂ ಸದಸ್ಯರಾದ ಮೋನಪ್ಪ ಪೂಜಾರಿ, ಜಯಂತಿ ಪಟ್ಟುಮೂಲೆ, ಮಾಜಿ ಸದಸ್ಯ ರವೀಂದ್ರ ಪೂಜಾರಿ, ಮಂಡಲ ಪಂಚಾಯತ್ ಅಧ್ಯಕ್ಷೆ ಕಮಲಾ ಮೊದಲಾದವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಹಮೀದ್ ಪೈಚಾರ್, ಸಿ.ಕೆ ಹಸೈನಾರ್, ಎಂ.ಡಿ ಹಸೈನಾರ್, ಸಿ.ಕೆ ಯೂಸುಫ್, ಶರೀಫ್, ಝುಬೈರ್ ಕೊಳಂಬೆ, ರಮೇಶ್ ಮಾಡನ್ನೂರು ಜೊತೆಗಿದ್ದರು.

ಅಪಾಯಕಾರಿ ಮರ ತೆರವಿಗೆ ಆಗ್ರಹ:
ಮಾಡನ್ನೂರು ನೂರುಲ್ ಹುದಾ ಹಾಗೂ ಮಾರಿಯಮ್ಮ ದೇವಸ್ಥಾನ ರಸ್ತೆಯಲ್ಲಿ ಮರವೊಂದು ಅಪಾಯವನ್ನು ಆಹ್ವಾನಿಸುವಂತಿದೆ. ಮರದ ಬುಡ ಅಪಾಯಕಾರಿ ಸ್ಥಿತಿಯಲ್ಲಿದ್ದು ಬೀಳುವ ಸ್ಥಿತಿಯಲ್ಲಿದೆ. ಮರವನ್ನು ತೆರವು ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಜು.21ರಂದು ಮುಂಜಾನೆ 3.30ರ ವೇಳೆಗೆ ಮಾಡನ್ನೂರು ಸ್ಥಳೀಯ ಪರಿಸರದಲ್ಲಿ ಬೀಸಿದ ಬಿರುಗಾಳಿಗೆ ಹಲವು ಕಡೆ ಹಾನಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಸೀಮಿತ ಪ್ರದೇಶದಲ್ಲಿ ಕೆಲವೇ ಸೆಕುಂಡು ಮಾತ್ರ ಬಿರುಗಾಳಿ ಬೀಸಿರುವ ಸಾಧ್ಯತೆಯಿದೆ ಎಂದು ಅರಿಯಡ್ಕ ಗ್ರಾ.ಪಂ ಸದಸ್ಯೆ ಜಯಂತಿ ಪಟ್ಟುಮೂಲೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here