ಗಲ್ಫ್ ಯೂತ್ ಕಬಕ ಜಮಾಅತ್ ವತಿಯಿಂದ ಪ್ರತಿಭಾ ಪುರಸ್ಕಾರ, ಪ್ರೇರಕ ಕಾರ್ಯಕ್ರಮ

0

ಪುತ್ತೂರು: ಗಲ್ಫ್ ಯೂತ್ ಕಬಕ ಜಮಾಅತ್ ವತಿಯಿಂದ ಪ್ರೌಢ ಶಾಲಾ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪ್ರೇರಕ ಕಾರ್ಯಕ್ರಮ ಜು.21ರಂದು ಕಬಕ ಮಸೀದಿ ಹಾಲ್ ನಲ್ಲಿ ನಡೆಯಿತು.

ಪಿಯುಸಿ ವಿಭಾಗದಲ್ಲಿ ಫಾತಿಮತ್ ಸುಹೈಲ, ರಿಹಾನ್ ಕೆಎಫ್, ಫಾತಿಮತ್ ಲಮ್ಯ, ಅವ್ವಮತ್ ರಿಯಾ ಪುರಸ್ಕರಿಸಲ್ಪಟ್ಟರು. ಎಸ್ ಎಸ್ ಎಲ್ ಸಿ ವಿಭಾಗದಲ್ಲಿ ಫಾತಿಮತ್ ರಾಫಿಯಾ, ಖದೀಜಾ ಸುನಫಾ, ಕೆ ನಸೀಬಾ, ಹಸ್ನಿ ಹನೀಫಾ, ಶಾಹಿದಾ ಮತ್ತು ಶಿಝಾ ನಾಝ್ ಸನ್ಮಾನಿಸಲ್ಪಟ್ಟರು. ಕಬಕ ಮಸೀದಿಯ ಸದರ್ ಝಕಾರಿಯ ಅಹ್ಸನಿ ಕಾರ್ಯಕ್ರಮವನ್ನು ಉದ್ಘಾಟಿಸಿ, ದುವಾ ಆಶೀರ್ವಚನ ನೀಡಿ ಮಾತನಾಡಿ ವಿದ್ಯೆ ಇಸ್ಲಾಮಿನ ಜೀವನಾಡಿ ಮತ್ತು ಪ್ರಕಾಶವಾಗಿದೆ, ವಿದ್ಯೆ ಇಲ್ಲದಿರುವುದು ಕತ್ತಲೆಯಲ್ಲಿದಂತೆ, ಹೆತ್ತವರು ತಮ್ಮ ಸಂಪತ್ತನ್ನಾದರೂ ಮಾರಿ ಮಕ್ಕಳಿಗೆ ವಿದ್ಯೆಯನ್ನು ನೀಡಬೇಕು, ಗಲ್ಫ್ ಯೂತ್ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಈ ಕಾರ ತುಂಬ ಸಂತೋಷ ತಂದಿದೆ ಎಂದರು.

ಅತಿಥಿ ಕಬಕ ಗ್ರಾಮ ಪಂಚಾಯತ್ ಸದಸ್ಯ ಶಾಬಾರವರು ಮಾತನಾಡಿ ಗಲ್ಫ್ ಯೂತ್ ನವರು ಕೊರೊನಾ ಸಮಯದಲ್ಲಿ ಕಬಕದಲ್ಲಿ ಕಿಟ್ ವಿತರಿಸಿ ಮತ್ತು ಕೊರೊನಾ ನಂತರದ ಶಾಲಾ ವಿದ್ಯಾರ್ಥಿಗಳ ವಿದ್ಯೆಗೆ ಸುಮಾರು ಲಕ್ಷಕ್ಕೂ ಮಿಕ್ಕಿ ಹಣ ಖರ್ಚು ಮಾಡಿ ಟ್ಯುಟೋರಿಯಲ್ ಟ್ಯೂಷನ್ ನೀಡಿದ್ದಲ್ಲದೆ, ಕಬಕದ ಹಲವಾರು ಸೇವಾಕಾರ್ಯ ನಡೆಸಿದನ್ನು ನೆನಪಿಸಿ ಅಭಿನಂದನೆ ಸಲ್ಲಿಸಿದರು. ಮಾಜಿ ಪ್ರತಿನಿಧಿ ಸಿದ್ದಿಕ್ ಎಚ್.ಕೆ.ಬಿ.ಕೆ ಮಾತನಾಡಿ ದೂರದ ಮರುಭೂಮಿಗೆ ತನ್ನ ಕುಟುಂಬದ ಹೊಟ್ಟೆಪಾಡಿಗೆ ಕೆಲಸಕ್ಕೆ ಹೋಗಿ ತಾನು ತನ್ನ ವರಮಾನದ ಒಂದು ಚಿಕ್ಕ ಅಂಶವನ್ನು ಯಾವುದೇ ಪ್ರಚಾರವಿಲ್ಲದೆ ತನ್ನ ಊರಿನ ಬಡ ನಿರ್ಗತಿಕರಿಗೆ ನೀಡುವ ಇವರೆಲ್ಲರ ಕಾರ್ಯ ದೇವರು ಮೆಚ್ಚುವ ಕಾರ್ಯವಾಗಿದೆ ಎಂದು ಹೇಳಿದರು.

ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದ ಗಲ್ಫ್ ಯೂತ್ ಮಾಜಿ ಸಂಚಾಲಕ ಬಶೀರ್ ಹಾಜಿ, ಕಬಕ ಪ್ರೌಢ ಶಾಲಾ ವಿದ್ಯಾರ್ಥಿಗಳ ಫಲಿತಾಂಶವನ್ನು ಉತ್ತಮಗೊಳಿಸಲು ಪ್ರತಿ ವರ್ಷ ಸಾವಿರಾರು ರೂ ಖರ್ಚು ಮಾಡುತ್ತಿದ್ದ ನಾವು ಈ ವರ್ಷ ಯಾವುದೇ ಖರ್ಚು ಇಲ್ಲದೆ ಒಂದು ಉತ್ತಮ ಫಲಿತಾಂಶ ತಂದ ಪ್ರೌಢ ಶಾಲಾ ಅಧ್ಯಾಪಕ ವೃಂದಕ್ಕೆ ಮತ್ತು ಎಸ್ಡಿಎಂಸಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಸಮಿತಿ ಅಧ್ಯಕ್ಷ ಅಶ್ರಫ್ ನೌಷಾದ್ ಪೊಳ್ಯ ಮಾತನಾಡಿ ಉತ್ತಮ ಶಿಕ್ಷಣದೊಂದಿಗೆ ಮಾತ್ರ ಸಮಾಜದಲ್ಲಿ ಸಮುದಾಯದ ಉನ್ನತಿ ಸಾಧ್ಯ ಎಂದು ಹೇಳಿ ಕಳೆದ 9 ವರ್ಷದಿಂದ ಗಲ್ಫ್ ಯೂತ್ ಕಬಕದಲ್ಲಿ ಕೈಗೊಂಡ ಸೇವೆಯನ್ನು ಅವರು ವಿವರಿಸಿದರು. ವೇದಿಕೆಯಲ್ಲಿ ಸಮಿತಿ ಸಂಚಾಲಕ ರವೂಫ್ ವಿದ್ಯಾಪುರ ದುಬೈ, ಮಹಮ್ಮದ್ ಬೊಳ್ವಾರ್ ಕುವೈಟ್, ಉಸ್ಮಾನ್ ಮಸ್ಕತ್, ಅನ್ವರ್ ಖಾಲಿದ್ ಮಸ್ಕತ್ ಕಬಕ ಉಪಸಿತರಿದ್ದರು. ಹಾರಿಸ್ ದಿಲ್, ಖಾದರ್ ಭಾರತ್ ಮತ್ತು ರಫೀಕ್ ಕಸ್ತೂರಿ ಸಹಕರಿಸಿದರು. ಸದಸ್ಯ ಕಲಂದರ್ ಯೂಸುಫ್ ವಂದಿಸಿದರು. ಮಾಜಿ ಪ್ರತಿನಿಧಿ ಫಾರೂಕ್ ತವಕ್ಕಲ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here