ಪಾಣಾಜೆ: ಭಾರೀ ಮಳೆಗೆ ಮನೆಗೆ ಹಾನಿ

0

ಪುತ್ತೂರು: ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಾರಿ ಎಂಬಲ್ಲಿ ಸುರಿದ ಭಾರೀ ಮಳೆಯಿಂದಾಗಿ ವಿಕಲಚೇತನ ಅಬ್ದುಲ್ಲ ಎಂಬವರ ಮನೆಯು ಭಾಗಶ: ಹಾನಿಗೊಂಡಿದೆ. ಸದ್ರಿ ಸ್ಥಳಕ್ಕೆ ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈಮೂನತುಲ್ ಮೆಹ್ರಾ ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಸುಲೋಚನಾ, ಮೋಹನ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾ ಮತ್ತು ಸಿಬ್ಬಂದಿ ಯವರು ಸ್ಥಳ ಪರಿಶೀಲನೆ ಮಾಡಿದರು. ಅಧ್ಯಕ್ಷೆ ಮೈಮೂನತುಲ್ ಮೆಹ್ರಾರವರು ಕಂದಾಯ ಇಲಾಖಾ ಅಧಿಕಾರಿಯವರಿಗೆ ಪರಿಶೀಲಿಸುವಂತೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here