ವಿಕಲಚೇತನರಿಗೆ ಅಗತ್ಯ ಸಾಧನ ಸಲಕರಣೆಗಳ ವಿತರಣೆಯ ತಪಾಸಣಾ ಶಿಬಿರ

0

ಪುತ್ತೂರು: ವಿಕಲಚೇತನರ ದಿನ ನಿತ್ಯದ ಉಪಯೋಗಕ್ಕೆ ಬೇಕಾಗುವ ಅಗತ್ಯ ಸಲಕರಣೆಗಳ ವಿತರಣೆಯ ತಪಾಸಣಾ ಶಿಬಿರ ಜು.24ರಂದು ಪುತ್ತೂರು ರೋಟರಿ ಮನಿಷಾ ಸಭಾಂಗಣದಲ್ಲಿ ನಡೆಯಿತು.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದ.ಕ.ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಗ್ರಾಮೀಣ ಮತ್ತು ತಾಲೂಕು, ನಗರ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರು ಪುತ್ತೂರು ಹಾಗು ಅಲಿಂಕೋ ಸಂಸ್ಥೆ ಬೆಂಗಳೂರು, ರೋಟರಿ ಕ್ಲಬ್ ಪುತ್ತೂರು ಯುವ ಸಂಯುಕ್ತ ಆಶ್ರಯದಲ್ಲಿ ನಡೆದ ತಪಾಸಣೆ ಶಿಬಿರವನ್ನು ತಾಲೂಕು ವಿಕಲಚೇತನರ ನೋಡೆಲ್ ಅಧಿಕಾರಿ ವಾಣಿಶ್ರೀ ಅವರು ಉದ್ಘಾಟಿಸಿ ಮಾತನಾಡಿ ವಿಕಲಚೇತನರ ದೈನಂದಿನ ಚಟುವಟಿಕೆಗೆ ಅನುಕೂಲವಾಗುವಂತೆ ಸಲಕರಣೆ ಪಡೆಯಲು ಫಲಾನುಭವಿಗಳು ತಪಾಸಣೆ ಶಿಬಿರದ ಭಾಗವಹಿಸಿ ಸದುಪಯೋಗವನ್ನು ಪಡೆಯಬೇಕು ಎಂದು ಹೇಳಿದರು.


ನಿಮ್ಮ ಜೀವನದಲ್ಲಿ ಎದುರಿಸುವ ಸಮಸ್ಯೆಗಳಿಗೆ ಸಂಘ ಸಂಸ್ಥೆ ಕೈಜೋಡಿಸುತ್ತದೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೋಟರಿ ಪುತ್ತೂರು ಯುವ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ಅವರು ಮಾತನಾಡಿ ವಿಶೇಷ ಚೇತನರ ಜೀವನದಲ್ಲಿ ಬಂದಿರುವ ತೊಂದರೆಗಳು ಮತ್ತು ನೀವು ಎದುರಿಸುವ ಸಮಸ್ಯೆಗಳಿಗೆ ಸಂಘ ಸಂಸ್ಥೆಗಳು ಸದಾ ಕೈ ಜೋಡಿಸಲಿದೆ. ಶಿಬಿರದ ಪ್ರಯೋಜನ ಪಡೆಯುವಂತೆ ಹೇಳಿದರು. ತಾಲೂಕು ಪಂಚಾಯತ್ ವಿಷಯ ನಿರ್ವಾಹಕ ಪ್ರವೀಣ್ ಕುಮಾರ್, ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಯದುರಾಜ್ ಮಾತನಾಡಿದರು. ಅಲಿಂಕೋ ಸಂಸ್ಥೆಯ ಸಿಬ್ಬಂದಿ ಸುಶಾಂತ್, ಪುತ್ತೂರು ತಾಲೂಕು ಎಮ್.ಆರ್.ಡಬ್ಲ್ಯೂ ನವೀನ್, ಕಡಬ ತಾಲೂಕಿನ ಎಂ.ಆರ್.ಡಬ್ಲ್ಯೂ ಅಕ್ಷತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಯುವ ಪೂರ್ವಾಧ್ಯಕ್ಷ ಉಮೇಶ್ ನಾಯಕ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ತಪಾಸಣಾ ಶಿಬಿರ ನಡೆಯಿತು.

LEAVE A REPLY

Please enter your comment!
Please enter your name here