ಕಾವು:ಈಶ್ವರಮಂಗಲ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘ ಇದರ ನೇತೃತ್ವದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ,ಮಹಿಳಾ ಸಂಘ ಮತ್ತು ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಈಶ್ವರಮಂಗಲ ವಲಯ ಇದರ ಸಹಕಾರದೊಂದಿಗೆ ಕಂಡಡೊಂಜಿ ದಿನ ಕಾರ್ಯಕ್ರಮ ಈಶ್ವರಮಂಗಲ ಮರಕ್ಕಡ ಗದ್ದೆಯಲ್ಲಿ ಜು 28 ರಂದು ನಡೆಯಲಿದೆ.
ಉದ್ಘಾಟನಾ ಕಾರ್ಯಕ್ರಮ:
ಕಾರ್ಯಕ್ರಮವನ್ನು ಈಶ್ವರಮಂಗಲ ಮರಕ್ಕಡ ಗದ್ದೆಯ ಮಾಲಕರಾದ ಗಿರೀಶ್ ರೈ ದೀಪ ಪ್ರಜ್ವಲಿಸಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಪೂರ್ವ ಅಧ್ಯಕ್ಷರಾದ ನಾಗಪ್ಪ ಗೌಡ ಬೊಮ್ಮೇಟ್ಟಿ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಒಕ್ಕಲಿಗ ಗೌಡ ಸೇವಾ ಸಂಘ ನೆಟ್ಟಣಿಗೆ ಮೂಡ್ನೂರು ಇದರ ಅಧ್ಯಕ್ಷರಾದ ದಿವಾಕರ ಗೌಡ ಮಡ್ಯಲಮಜಲು, ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಕಲಾವತಿ ಎಸ್ ಗೌಡ, ಒಕ್ಕಲಿಗ ಗೌಡ ಮಹಿಳಾ ಘಟಕದ ಅಧ್ಯಕ್ಷರಾದ ದೇವಿಪ್ರಶಾಂತಿ, ಶೇಶಪ್ಪಗೌಡ ಮೆಣಸಿನಕಾನ, ಹೊನ್ನಪ್ಪ ಗೌಡ ಕೊಂಬೋಟ್ಟು, ಜತ್ತಪ್ಪ ಗೌಡ ಕೊಂಕಣಿಗುಂಡಿ, ನರೇಂದ್ರ ಗೌಡ ಹೊಸಮನೆ ಆಜಡ್ಕ ,ಮೋಹನಾಂಗಿ ಬೀಜ0ತಡ್ಕ, ವಿಜಯ ಕುಮಾರ್ ಕೆಮ್ಮತಡ್ಕ, ಭಾಸ್ಕರ ಗೌಡ ದೊಡ್ಡಮನೆ, ಅರುಣ್ ಕುಮಾರ್ ಕನ್ನಡ್ಕ, ಶ್ರೀಧರ ಗೌಡ ಕನ್ನಯ, ಸುಂದರ ಗೌಡ ಸಾರಕೂಟೇಲು, ಬಾಲಕೃಷ್ಣ ಗೌಡ ಪಟ್ಲಡ್ಕ ಭಾಗವಹಿಸಲಿದ್ದರೆ.
ಸಮಾರೋಪ ಕಾರ್ಯಕ್ರಮ
ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈಶ್ವರಮಂಗಲ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ಜಗ್ಗನಾಥ ಗೌಡ ಪಟ್ಟೆ ವಹಿಸಲಿದ್ದು,ಮುಖ್ಯ ಅತಿಥಿಗಳಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಪೂರ್ವ ಶಾಸಕರಾದ ಸಂಜೀವ ಮಟ0ದೂರು,ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ, ಒಕ್ಕಲಿಗ ಗೌಡ ಸೇವಾ ಸಂಘದ ತಾಲೂಕು ಅಧ್ಯಕ್ಷರಾದ ರವಿ ಮುಂಗ್ಲಿಮನೆ,ಒಕ್ಕಲಿಗ ಗೌಡ ಯುವ ಘಟಕದ ತಾಲೂಕು ಅಧ್ಯಕ್ಷರಾದ ಅಮರನಾಥ ಗೌಡ ಬಪ್ಪಳಿಗೆ, ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾದ ವಾರಿಜಾ ಕೆ ಗೌಡ,ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅದ್ಯಕ್ಷರಾದ ಶಿವರಾಮ ಗೌಡ ಹೆಚ್ ಡಿ, ಈಶ್ವರಮಂಗಲ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ವಲಯ ಉಸ್ತುವಾರಿ ಲೋಕೇಶ್ ಚಾಕೋಟೆ,ಕುಂಬ್ರ ವಲಯ ಉಸ್ತುವಾರಿ ಸತೀಶ್ ಪಾಂಬಾರು,ನೆಟ್ಟಣಿಗೆ ಮುಡ್ನೂರು ಗ್ರಾಮ ಸಮಿತಿ ಉಪಾಧ್ಯಕ್ಷರಾದ ನವೀನ್ ಕುಕ್ಕುಡೇಲು, ಪ್ರಗತಿಪರ ಕೃಷಿಕರಾದ ವಿಶ್ವನಾಥ ಗೌಡ ಆಡೀಲು, ನಿಡ್ಪಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷರಾಗಿರುವ ನಾಗೇಶ್ ಗೌಡ ಪುಳಿತ್ತಡಿ,ಜಯರಾಮ ಗೌಡ ಶೇಖ ಭಾಗವಹಿಸಲಿದ್ದಾರೆ.
ಕೆಸರುಗದ್ದೆ ಕ್ರೀಡಾಕೂಟ
ಪುರುಷರಿಗೆ,ಮಹಿಳೆಯರಿಗೆ ,ಮಕ್ಕಳಿಗೆ ವಿವಿಧ ಕ್ರೀಡಾಕೂಟ ಕೆಸರು ಗದ್ದೆಯಲ್ಲಿ ನಡೆಯಲಿದೆ.
ನೃತ್ಯ-ಗಾನ ಸಾಂಸ್ಕೃತಿಕ ವೈಭವ
ಸಂಜೆ ಸಮರ್ಥ ಸಾಂಸ್ಕೃತಿಕ ಕಲಾ ತಂಡದಿಂದ ಗೌಡ ಸಮಾಜದಲ್ಲಿ ಜಾನಪದ ಸೊಗಡು ಎಂಬ ವಿಷಯಾಧಾರೀತ ನೃತ್ಯ ಗಾನ ವೈಭವವು ತೇಜಸ್ವಿನಿ ನವೀನ್ ಗೌಡ ಕುಕ್ಕುಡೇಲು ಇವರ ಸಂಯೋಜನೆಯಲ್ಲಿ ನಡೆಯಲಿದೆ.ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೋಳಿಸಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.