ಕಾರ್ಗಿಲ್ ವಿಜಯೋತ್ಸವವನ್ನು ಭಾವನಾತ್ಮಕವಾಗಿ ಆಚರಿಸೋಣ- ಮೀನಾಕ್ಷಿ
ಬೆಟ್ಟಂಪಾಡಿ: ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಕೇಶವದರ್ಶಿನಿ ಸಭಾಂಗಣದಲ್ಲಿ ಕಾರ್ಗಿಲ್ ವಿಜಯ ದಿವಸ್ ಜು. 26 ರಂದು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಧ್ಯಾತ್ಮಿಕ ಮತ್ತು ನೈತಿಕ ಪರಿವೀಕ್ಷಣಾಧಿಕಾರಿ ಮೀನಾಕ್ಷಿ ಮಾತನಾಡಿ, ಬಂಜೆಯಲ್ಲ ಭಾರತಾಂಬೆ ಶೂರಸುತರದೀನೆಲ, ಎಂಬ ಮಾತಿನೊಂದಿಗೆ ಸಾರ್ವಬ್ ಕಾಲಿ, ಮನೋಜ್ ಕುಮಾರ್ ಪಾಂಡೆ, ರಾಜೇಶ್ ಅಧಿಕಾರಿ, ಪದ್ಮ ಪಾಣಿ ಆಚಾರ್ಯ, ಯೋಗೇಂದ್ರ ಸಿಂಗ್ ಮೊದಲಾದ ವೀರಯೋಧರ ಹೋರಾಟದ ಹಾದಿಗಳನ್ನು ಮನಮುಟ್ಟುವಂತೆ ವಿದ್ಯಾರ್ಥಿಗಳೊಡನೆ ಹಂಚಿಕೊಂಡರು.
9ನೇ ತರಗತಿ ವಿದ್ಯಾರ್ಥಿಗಳಾದ ಶ್ರಾವ್ಯ ಯು. ರೈ ಮತ್ತು ಧನ್ವಿ ರೈ ಕೋಟೆ ವೀರಯೋಧರ ಜನ್ಮವೃತ್ತಾಂತಗಳನ್ನು ಬಿಂಬಿಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಂಗನಾಥ ರೈ ಗುತ್ತು ಎಲ್ಲಾ ವೀರಯೋಧರ ಶೌರ್ಯ ಸಾಹಸಗಳು ಹಾಗೂ ದೇಶಪ್ರೇಮ ನಮಗೆಲ್ಲರಿಗೂ ಮಾದರಿಯಾಗಲಿ ಎಂದರು.
ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವೀರಯೋಧರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಶಾಲಾ ಮುಖ್ಯ ಶಿಕ್ಷಕ ರಾಜೇಶ್ ಎನ್. ಕಾರ್ಯಕ್ರಮ ನಿರೂಪಿಸಿದರು.