ಬಡಗನ್ನೂರುಃ ದ.ಕ.ಜಿ.ಪಂ.ಉ.ಹಿ.ಪ್ರಾ ಶಾಲಾ ಬಡಗನ್ನೂರು ಇದರ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಆಟಿಕೂಟ ,ಆಟಿ ವಿಶೇಷ ಖಾದ್ಯ,ಚೆಣ್ಣೆಮನೆ ಪ್ರಾತ್ಯಕ್ಷಿಕೆ ಉಪನ್ಯಾಸ, ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಅಟೋಟ ಸ್ಪರ್ಧಾ ಕಾರ್ಯಕ್ರಮವು ಜು. 27 ರಂದು ಬಡಗನ್ನೂರು ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶ್ರೀ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿ,ಆಟಿ ಕಷ್ಟ ಮತ್ತು ಇಷ್ಟಕರ ತಿಂಗಳು , ಹಿಂದಿನ ಕಾಲದಲ್ಲಿ ತಮ್ಮ ಹಿರಿಯರಿಗೆ ಜೀವನ ಕಷ್ಟಕರವಾದ ಸಂದರ್ಭದಲ್ಲಿ ಪ್ರಕೃತಿ ದತ್ತವಾದ ಸೊಪ್ಪು ತರಕಾರಿ ಸೇವನೆ ಮಾಡಿ ಜೀವನ ನಡೆಸುತ್ತಿದ್ದರು.ಆಟಿ ತಿಂಗಳಲ್ಲಿ ಉಪಯೋಗಿಸುವ ಗಿಡಮೂಲಿಕೆಗಳಲ್ಲಿ ಔಷಧೀಯ ಗುಣ ಇರುವುದರಿಂದ ಆರೋಗ್ಯ ಬಲಾಢ್ಯವಾಗಿತ್ತು. ಮನರಂಜನೆಗಾಗಿ ಚೆಣ್ಣೆಮನೆ ಆಟ ಆಡುತ್ತಿದ್ದರು. ಆಟಿ ತಿಂಗಳಲ್ಲಿ ಹೊಸದಾಗಿ ಮದುವೆಯಾದ ಹೆಣ್ಣು ಮಗಳನ್ನು ತವರು ಮನೆಗೆ ಕಳಿಸಿಕೊಡುವ ಪ್ರತೀತಿ ಅಂದಿನಿಂದಲೇ ಇತ್ತು. ನಾವು ನಮ್ಮ ಪರಿಸರದ ಸುತ್ತಲಿನ ಔಷಧೀಯ ಗುಣಗಳನ್ನು ಹೊಂದಿರುವ ಸೊಪ್ಪು ತರಕಾರಿಗಳನ್ನು ಸೇವಿಸಿ ಆರೋಗ್ಯಕರ ನೆಮ್ಮದಿ ಜೀವನ ಮಾಡೋಣ ಎಂದರು.
ಪಟ್ಟೆ ಶ್ರೀ ಕೃಷ್ಣ ಅನುದಾನಿತ ಹಿ.ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಶಂಕರಿ ಚೆಣ್ಣೆಮನೆ ಪ್ರಾತ್ಯಕ್ಷಿಕೆ ತೋರ್ಪಡಿಸಿ ಮಾತನಾಡಿ ಆಟಿ ವಿಶಿಷ್ಟತೆ ಬಗ್ಗೆ ತಿಳಿಸಿದರು. ಗ್ರಾ.ಪಂ ಮಾಜಿ ಅದ್ಯಕ್ಷ ಸಂತೋಷ್ ಆಳ್ವ ಗಿರಿಮನೆ ಮಾತನಾಡಿ ಶುಭಹಾರೈಸಿದರು.
ಆಟಿಕೂಟ ಸಮಿತಿ ಅಧ್ಯಕ್ಷ ನಾರಾಯಣ ರೈ ಕುದ್ಕಾಡಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ವ್ಯಕ್ತಪಡಿಸಿದರು.ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಬು ಮೂಲ್ಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೈ ಪಳ್ಳತ್ತಾರು ಕೋಶಾಧಿಕಾರಿ ಸಲಾವುದ್ದೀನ್ ಪದಡ್ಕ, ಆಟಿಕೂಟ ಸಮಿತಿ ಕಾರ್ಯದರ್ಶಿ ಶಾಂಭವಿ ಶೆಟ್ಟಿ ಕುದ್ಕಾಡಿ, ಶತಮಾನೋತ್ಸವ ಸಮಿತಿ ಉಪಾಧ್ಯಕ್ಷ ಶ್ರೀಧರ ಭಟ್ ಸಿ.ಯಚ್, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳು, ಮಕ್ಕಳ ಪೋಷಕರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರುಗಳು, ಶಿಕ್ಷಣ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಹರೀಣಾಕ್ಷಿ ಎ ಸ್ವಾಗತಿಸಿ,ಶತಮಾನೋತ್ಸವ ಸಮಿತಿ ಸಂಚಾಲಕ ಸತೀಶ್ ರೈ ಕಟ್ಟಾವು ವಂದಿಸಿ, ಸಹ ಶಿಕ್ಷಕಿ ರಮ್ಯ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ವಿಜಯಲಕ್ಷ್ಮಿ , ಅತಿಥ ಮಧುಶ್ರೀ ಗೌರವ ಶಿಕ್ಷಕಿ ಸೌಮ್ಯ , ಮಾಜಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಾಲಿಂಗ ಪಾಟಾಳಿ, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸುಬ್ರಾಯ ನಾಯಕ್, ಶತಮಾನೋತ್ಸವ ಸಮಿತಿ ಉಪಾಧ್ಯಕ್ಷ ಬಾಬು ಬಿ, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯ ಮಹಾಬಲ ರೈ ಮೇಗಿನಮನೆ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಶಾಲಾಭಿವೃದ್ಧಿ ಸಮಿತಿ ಸದಸ್ಯೆ ಸುಲೋಚನ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಾಂಭವಿ ಶೆಟ್ಟಿ ಕುದ್ಕಾಡಿ, ಅಂಗನವಾಡಿ ಶಿಕ್ಷಕಿಯರಾದ ಹೇಮಾವತಿ ಪೆರಾಲು, ಮತ್ತು ಚಂದ್ರಮ್ಮ ಪಟ್ಟೆ ಸಹಕರಿಸಿದರು.
ಚೆಣ್ಣೆಮನೆ ಪ್ರಾತ್ಯಕ್ಷಿಕೆ
ಪಟ್ಟೆ ಶ್ರೀ ಕೃಷ್ಣ ಅನುದಾನಿತ ಹಿ.ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಶಂಕರಿ ಹಾಗೂ ವೀಣಾ ಶ್ರೀನಿವಾಸ್ ಭಟ್ ಸಿ.ಯಚ್ ಚೆಣ್ಣೆಮನೆ ಆಟ ಅಡುವ ಮೂಲಕ ಪ್ರಾತ್ಯಕ್ಷಿಕೆ ನೀಡಿದರು.
ಅಟಿ ಕಲೆಂಜ ಕುಣಿತ;-
ನಿಡ್ಪಳ್ಲಿ ಗ್ರಾಮದ ಕುಕ್ಕುಪುಣಿ ಮೋಹನ್ ಮತ್ತು ಬಳಗದವರಿಂದ ಕಲೆಂಜ ಪ್ರಾತ್ಯಕ್ಷಿಕೆ ನಡೆದು ತುಳು ನಾಡಿನ ಸಂಪ್ರದಾಯದಂತೆ ಆಟಿಕಲೆಂಜನಿಗೆ ತೆಂಗಿನ ಕಾಯಿ, ಅಕ್ಕಿ ಎಣ್ಣಿ ನೀಡಲಾಯಿತು.
ವಿವಿಧ ಅಟೋಟ ಸ್ಪರ್ಧೆ;-
ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ , ಹಿರಿಯ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಅಯೋಜಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.
ವಿಶೇಷ ಖಾದ್ಯಗಳು:– ಸಮಾರು 15 ಬಗೆಯ ವಿವಿಧ ರೀತಿಯ ಖಾದ್ಯ ತಯಾರಿಸಲಾಯಿತು. ಸಮಾರು 500ಕ್ಕೂ ಹೆಚ್ಚು ಮಂದಿ ಆಟಿಯ ವಿವಿಧ ಖಾದ್ಯ ಸವಿದರು.