ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಟ್ಟದ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ

0

ಪುತ್ತೂರು: ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆ ಪುತ್ತೂರು 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮಟ್ಟದ ಸ್ಪರ್ಧೆಗಳ ಉದ್ಘಾಟನಾ ಸಮಾರಂಭವು ಜು.27ರಂದು ಶಾಲಾ ಸಭಾಂಗಣದಲ್ಲಿ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬೆಥನಿ ಆಂಗ್ಲಮಾಧ್ಯಮ ಶಾಲೆಯ ಹಿರಿಯ ಶಿಕ್ಷಕಿಯಾದ ಬೃಂದಾರವರು ಮಾತನಾಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಕ್ಕಳು ಕೇವಲ ಓದು ಬರಹಗಳಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುವುದಲ್ಲದೇ,ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶನ ಪಡಿಸುವುದರ ಮೂಲಕ ತಮ್ಮ ಪ್ರತಿಭಾ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಮಕ್ಕಳನ್ನು ಪ್ರೇರೇಪಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿಯರಾದ ಭಗಿನಿ ಸುನಿತ ಬಿ.ಎಸ್.ರವರು ಸ್ಪರ್ಧೆಗಳ ಪ್ರಾಮುಖ್ಯತೆಗಳನ್ನು ಪ್ರತಿಬಿಂಬಿಸುವಂತೆ ಮಾಡಿ ಮಕ್ಕಳನ್ನು ಹುರಿದುಂಬಿಸಿದರು. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಶಾಂತಿ ಆ್ಯಗ್ನೇಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರದಲ್ಲಿ ಚಿತ್ರಕಲೆ, ಕ್ಯಾಲಿಗ್ರಫಿ, ದೇಶಭಕ್ತಿಗೀತೆ, ಭಾವಗೀತೆ, ಜನಪದಗೀತೆ, ಪಿಕ್ ‌ಆ್ಯಂಡ್ ಆ್ಯಕ್ಟ್, ಧಾರ್ಮಿಕ ಪಠಣ, ಬಾಟಲ್ಪೇಂಟಿಂಗ್, ರಸಪ್ರಶ್ನೆ, ಹೂವಿನಕಾರ್ಪೆಟ್, ಮಾತುಗಾರಿಕೆ, ಕೊಲಾಜ್, ಪ್ರಬಂಧ, ಪವರ್ಪಾಯಿಂಟರ್ ಸ್ತುತಿ, ನೃತ್ಯ ವಿಜ್ಞಾನ ಮಾದರಿ, ರಂಗೋಲಿ, ಕಸದಿಂದ‌ ರಸ, ಕ್ಲೇಮಾಡೆಲಿಂಗ್ ಹೀಗೆ ಅನೇಕ ಸ್ಪರ್ಧೆಗಳನ್ನು ನಡೆಸಲಾಯಿತು.

ಶಾಲಾ ಶಿಕ್ಷಕಿಯಾದ ಜೆನಿಫರ್ಮೊರಾಸ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here