ಪರ್ಪುಂಜ ಸ್ನೇಹ ಮಹಿಳಾ ಮಂಡಲಕ್ಕೆ ಆಯ್ಕೆ-ಅಧ್ಯಕ್ಷೆ: ಪ್ರಮೀಳಾ ಎಸ್, ಕಾರ್ಯದರ್ಶಿ: ರೇಖಾ ಎಸ್

0

ಪುತ್ತೂರು: ಪರ್ಪುಂಜ ಸ್ನೇಹ ಮಹಿಳಾ ಮಂಡಲದ ಪದಾಧಿಕಾರಿಗಳ ಆಯ್ಕೆಯ ಸಭೆಯು ಪರ್ಪುಂಜ ರಾಮಜಾಲು ಗರಡಿ ವಠಾರದಲ್ಲಿ ಜು.28ರಂದು ನಡೆಯಿತು.
ಸ್ನೇಹ ಯುವಕ ಮಂಡಲದ ಗೌರವ ಸಲಹೆಗಾರರಾದ ರಾಜೇಶ್ ರೈ ಪರ್ಪುಂಜರವರ ಉಪಸ್ಥಿತಿಯಲ್ಲಿ ಸ್ನೇಹ ಮಹಿಳಾ ಮಂಡಲದ ಪದಾಧಿಕಾರಿಗಳ ಆಯ್ಕೆಯನ್ನು ನಡೆಸಲಾಯಿತು. ಸ್ನೇಹ ಯುವಕ ಮಂಡಲದ ಅಧ್ಯಕ್ಷರಾದ ವಿಪಿನ್ ಶೆಟ್ಟಿ, ಕಾರ್ಯದರ್ಶಿ ನಿತಿನ್ ಗೌಡ, ಸ್ನೇಹ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಬೇಬಿ ರೈ, ಗೌರವ ಸಲಹೆಗಾರರಾದ ದೇವಕಿ ಮಡ್ತಿಲ, ವಿನೋದ ಮಗಿರೆ, ಪ್ರಮೀಳಾ ಟಿ, ರೇಖಾ ರೈ ಉಪಸ್ಥಿತರಿದ್ದರು.

ಸ್ನೇಹ ಮಹಿಳಾ ಮಂಡಲದ ನೂತನ ಅಧ್ಯಕ್ಷೆಯಾಗಿ ಪ್ರಮೀಳಾ. ಎಸ್, ಪ್ರಧಾನ ಕಾರ್ಯದರ್ಶಿಯಾಗಿ ರೇಖಾ. ಎಸ್, ಉಪಾಧ್ಯಕ್ಷೆಯಾಗಿ ಶ್ರೀಮತಿ ಸುರೇಶ್, ಜೊತೆ ಕಾರ್ಯದರ್ಶಿಯಾಗಿ ಭವ್ಯಶ್ರೀ ಪರ್ಪುಂಜ, ಕೋಶಾಧಿಕಾರಿಯಾಗಿ ರಶ್ಮಿತಾ. ಡಿ. ರೈರವರುಗಳನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಕ್ರೀಡಾ ಸಮಿತಿಗೆ ಭವ್ಯಶ್ರೀ ಶೇಡಿಗುಂಡಿ, ಸಾಂಸ್ಕೃತಿಕ ಸಮಿತಿಗೆ ರಮ್ಯ ಪರ್ಪುಂಜ ಹಾಗು ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾಗಿ ಸುಂದರಿ ಪರ್ಪುಂಜ, ರೋಹಿಣಿ ಪರ್ಪುಂಜ, ಮೀನಾಕ್ಷಿ ಪರ್ಪುಂಜ, ಶ್ರೀಮತಿ ಹೊಸಮನೆ, ಸುಮತಿ ಮಡ್ತಿಲ, ಯಶೋಧ ಮಾಡಾವು, ನೀತಿತಾ ರೈ ಮುರುವ, ಸಾವಿತ್ರಿ ರೈ ಪರ್ಪುಂಜ, ಉಷಲತಾ ಪರ್ಪುಂಜ, ಪವಿತ್ರ ಪರ್ಪುಂಜ, ಸುಶೀಲ ಪರ್ಪುಂಜ, ಮಾಲತಿ ಶೇಡಿಗುಂಡಿ, ಹೇಮಾವತಿ ಪರ್ಪುಂಜ, ರಕ್ಷಾ. ಕೆ. ಆರ್, ಶ್ರೇಯಾ. ಆರ್. ರೈ, ಮೋಕ್ಷಿತಾ. ಪಿರವರುಗಳನ್ನು ಆಯ್ಕೆ ಮಾಡಲಾಯಿತು. ರೇಖಾ ಎಸ್.ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here