ಪಾತ್ರತೋಟದಲ್ಲಿ ಗುಡ್ಡ ಕುಸಿತ: ವಿಟ್ಲ – ಕಲ್ಲಡ್ಕ ರಸ್ತೆ ಬಂದ್ – ವಾಹನ ಸವಾರರಿಗೆ ಬದಲಿ ರಸ್ತೆ ಬಳಸಲು ಸೂಚನೆ

0

ವಿಟ್ಲ: ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಟ್ಲ – ಕಲ್ಲಡ್ಕ ರಸ್ತೆಯ ಪಾತ್ರತೋಟ ಎಂಬಲ್ಲಿ ಗುಡ್ಡೆ ಕುಸಿತ ಉಂಟಾಗಿ ವಿಟ್ಲ – ಕಲ್ಲಡ್ಕ ರಸ್ತೆ ಬ್ಲಾಕ್ ಆಗಿರುವ ಘಟನೆ ಜು.30ರಂದು ನಡೆದಿದೆ.‌ ಘಟನೆಯಿಂದಾಗಿ ಈ ದಾರಿಯಲ್ಲಿ ವಾಹನ‌ ಸಂಚಾರ ಸ್ಥಗಿತಗೊಳಿಸಲಾಗಿದೆ.

ಗುಡ್ಡ ಕುಸಿತದಿಂದ ವಿದ್ಯುತ್ ಕಂಬ ಸಹಿತ ವಿದ್ಯುತ್‌ ತಂತಿ ರಸ್ತೆಗೆ ಬಿದ್ದಿದೆ. ರಸ್ತೆ ಬದಿಯ ಗುಡ್ಡ ಕುಸಿತದಿಂದಾಗಿ ಗುಡ್ಡದಲ್ಲಿದ್ದ ಬಂಡೆಕಲ್ಲೊಂದು ರಸ್ತೆಗೆ ವಾಲಿ ನಿಂತಿದ್ದು, ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿ‌ನಲ್ಲಿ ವಿಟ್ಲ- ಕಲ್ಲಡ್ಕ ಮಧ್ಯೆ ಸಂಚಾರ ನಡೆಸುವ ವಾಹನ ಸವಾರರು ಮಜ್ಜೋಣಿ – ಕೊಡಪದವು – ಮಂಗಲಪದವು ಹಾಗೂ ವೀರಕಂಭ- ಅನಂತಾಡಿ- ಮಂಗಲಪದವು ಆಗಿ ಸಂಚರಿಸಬಹುದಾಗಿದೆ.

LEAVE A REPLY

Please enter your comment!
Please enter your name here