ಹಾರಾಡಿ ಭಾರತ್ ಆಟೋ ಕಾರ್ಸ್ ಬಳಿ ಉಕ್ಕಿ ಹರಿದ ತೋಡು-ಕಾಣದಾದ ರೋಡು

0

ಪುತ್ತೂರು: ಭಾರಿ ಮಳೆಗೆ ಹಾರಾಡಿ ಭಾರತ್ ಅಟೋ ಕಾರ್ಸ್ ಶೋ ರೂಮ್ ಎದುರಿನ ರಸ್ತೆ ಮತ್ತು ತೋಡು ಒಂದಾಗಿ ವಾಹನ ಸವಾರರಿಗೆ ಅಡಚಣೆ ಉಂಟಾಗಿದೆ .ತೋಡು ಯಾವುದು ರಸ್ತೆ ಯಾವುದು ಎಂದು ಗೊತ್ತಾಗದ ರೀತಿಯಲ್ಲಿ ನೀರು ಹರಿಯುತ್ತಿದ್ದು ವಾಹನ ಸವಾರರು ಪರದಾಡುವಂತಾಗಿದೆ.ಪಕ್ಕದ ತೋಡು ತುಂಬಿ ಹರಿದಿದ್ದು, ಭಾರತ್ ಬೀಡಿ ಸಂಸ್ಥೆಯ ಕಟ್ಟಡದ ಮೆಟ್ಟಿಲ ತನಕ ಮಳೆ ನೀರು ಹರಿದಿದೆ.ಹಾರಾಡಿ ರೈಲ್ವೇ ನಿಲ್ದಾಣ ರಸ್ತೆಯ ಭಾರತ್ ಶೋ ರೂಮ್ ಪಕ್ಕದಲ್ಲಿರುವ ಶ್ರದ್ಧಾ ಎಂಬ ಮನೆಯ ಆವರಣಕ್ಕೂ ಮಳೆ ನೀರು ನುಗ್ಗಿದೆ.

ಹಾರಾಡಿ ರೈಲ್ವೇ ನಿಲ್ದಾಣ ರಸ್ತೆಯ ಭಾರತ್ ಶೋ ರೂಮ್ ಪಕ್ಕದಲ್ಲಿರುವ ಶ್ರದ್ಧಾ ಎಂಬ ಮನೆಯ ಆವರಣಕ್ಕೂ ಮಳೆ ನೀರು ನುಗ್ಗಿದೆ.

LEAVE A REPLY

Please enter your comment!
Please enter your name here