ಜು.31:ಪುತ್ತೂರು ಆರ್‌ಟಿಒ ಕಛೇರಿಯ ಹಿರಿಯ ಸಹಾಯಕ ಪುರುಷೋತ್ತಮ್ ಬಿ.ಸೇವಾ ನಿವೃತ್ತಿ

0

ಪುತ್ತೂರು: ಪ್ರಾದೇಶಿಕ ಸಾರಿಗೆ ಇಲಾಖೆಗಳ ಕಛೇರಿ(ಆರ್‌ಟಿಒ)ಯಲ್ಲಿ ಸುದೀರ್ಘ 37 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪುತ್ತೂರು ಆರ್‌ಟಿಒ ಕಛೇರಿಯ ಹಿರಿಯ ಸಹಾಯಕ ಪುರುಷೋತ್ತಮ್ ಬಿ.ರವರು ಜು.31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.


ಪ್ರಸ್ತುತ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಘಟಕದ ರಾಜ್ಯ ಪರಿಷತ್ ಸದಸ್ಯರಾಗಿರುವ ಪುರುಷೋತ್ತಮ್ ಬಿ.ರವರು 1988, ಅಕ್ಟೋಬರ್ ತಿಂಗಳಿನಂದು ಬೆಂಗಳೂರಿನ ಯಶ್ವಂತಪುರ ಕಛೇರಿಯಲ್ಲಿ ಸೇವೆಯನ್ನು ಆರಂಭಿಸಿ, ಕೋರಮಂಗಲ ಕಛೇರಿಯಲ್ಲಿ ಸೇವೆಯನ್ನು ಮುಂದುವರೆಸಿದ್ದರು. ಬಳಿಕ 1995ರಲ್ಲಿ ಮಂಗಳೂರಿನ ಆರ್‌ಟಿಒ ಕಛೇರಿಗೆ ವರ್ಗಾವಣೆಗೊಂಡು 2002ರ ವರೆಗೆ ಸೇವೆ, 2002ರಿಂದ ನಿವೃತ್ತಿಯಾಗುವವರೆಗೆ ಪುತ್ತೂರು ಆರ್‌ಟಿಒ ಕಛೇರಿಯಲ್ಲಿ ಹಿರಿಯ ಸಹಾಯಕರಾಗಿ ನಿವೃತ್ತಿ ಹೊಂದಲಿದ್ದಾರೆ. ಪ್ರಸ್ತುತ ಪುರುಷೋತ್ತಮ್ ಬಿ.ರವರು ಪತ್ನಿ ಸುಶೀಲ, ಪುತ್ರಿ ಡಾ.ಮೇಘಶ್ರೀ, ಪುತ್ರ ಇಂಜಿನಿಯರ್ ವೈಶಾಕ್‌ರವರೊಂದಿಗೆ ಮಂಗಳೂರಿನ ಅಶೋಕ್ ನಗರ ಉರ್ವಾ ಮಾರ್ಕೆಟ್ ಇಲ್ಲಿ ವಾಸ್ತವ್ಯ ಹೊಂದಿದ್ದಾರೆ.

LEAVE A REPLY

Please enter your comment!
Please enter your name here