ಕೆದಂಬಾಡಿ ಮಠ: ಧರೆ ಕುಸಿತ, 5 ಸಾವಿರ ಕೋಳಿಗಳ ಸಾವು-5 ಲಕ್ಷ ರೂ.ನಷ್ಟ

0

ಪುತ್ತೂರು: ಕೋಳಿ ಸಾಕಾಣಿಕೆ ಕಟ್ಟಡಕ್ಕೆ ಧರೆ ಕುಸಿದ ಪರಿಣಾಮ 5 ಸಾವಿರಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿ ಸುಮಾರು 5 ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದ ಘಟನೆ ಕೆದಂಬಾಡಿ ಗ್ರಾಮದ ಮಠದಲ್ಲಿ ಜು.30ರಂದು ನಡೆದಿದೆ.

ಕೆದಂಬಾಡಿ  ಮಠ ಚಂದ್ರಾವತಿ ರೈ ಯವರಿಗೆ ಸೇರಿದ ಕೋಳಿ ಸಾಕಾಣಿಕೆ ಕಟ್ಟಡ ಇದಾಗಿದ್ದು ನಿರಂತರವಾಗಿ ಸುರಿದ ಮಳೆಯಿಂದಾಗಿ ಕಟ್ಟಡದ ಒಂದು ಬದಿಯ ಧರೆ ಕುಸಿದು ಕೋಳಿ ಸಾಕಾಣಿಕೆ ಕಟ್ಟಡ ಸಂಪೂರ್ಣ ಹಾನಿಗೊಳಗಾಗಿದ್ದು ಕಟ್ಟಡದೊಳಗಿದ್ದ ಕೋಳಿಗಳು ಸಾವನ್ನಪ್ಪಿವೆ. ಕೋಳಿ ಶೆಡ್ ಹಾನಿ ಹಾಗೂ ಕೋಳಿಗಳ ಸಾವಿನಿಂದಾಗಿ ಅಂದಾಜು  5ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಚಂದ್ರಾವತಿ ರೈಯವರು ತಿಳಿಸಿದ್ದಾರೆ. ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಸುಜಾತ ಸೇರಿದಂತೆ ಪಂಚಾಯತ್ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here