ಕಂಪೆನಿ ಸೆಕ್ರೆಟರಿ ಪ್ರೊಫೆಷನಲ್ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾದ ಶರತ್ ಕುಮಾರ್ ಎನ್.ರವರಿಗೆ “Southern India Regional Council ಪ್ರಶಸ್ತಿ

0

ಪುತ್ತೂರು: ICSI (Institute of company secretaries of India) ಡಿಸೆಂಬರ್ 2022 ರಲ್ಲಿ ನಡೆಸಿದ ಕಂಪೆನಿ ಸೆಕ್ರೆಟರಿ ಪ್ರೊಫೆಷನಲ್ ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳೊಂದಿಗೆ ತೇರ್ಗಡೆ ಹೊಂದಿದ ಶರತ್ ಕುಮಾರ್ ಎನ್.ರವರಿಗೆ “Late Anand Tamirisa Memorial Award” ನೀಡಿ ಗೌರವಿಸಿದೆ.

ICSI (Institute of company secretaries of India)ಇದರ SIRC (Southern India Regional Council), ರವರು ಜು.26ರಂದು ಬೆಂಗಳೂರಿನಲ್ಲಿ ನಡೆಸಿದ 48ನೇ ದಕ್ಷಿಣ ಭಾರತ ಕಂಪೆನಿ ಸೆಕ್ರೆಟರಿಗಳ ಪ್ರಾದೇಶಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶರತ್ ಕುಮಾರ್ ಎನ್.ರವರು ಬಲ್ನಾಡು ನಿವಾಸಿ ಬಾಲಕೃಷ್ಣ ನಾಯಕ್ ಮತ್ತು ಬಲ್ನಾಡು ಸ.ಹಿ.ಪ್ರಾ.ಶಾಲೆಯ ಸಹಶಿಕ್ಷಕಿ ಇಂದಿರಾ ಪಿ. ದಂಪತಿ ಪುತ್ರ.

LEAVE A REPLY

Please enter your comment!
Please enter your name here