ಬೆಟ್ಟಂಪಾಡಿ: ಬ್ಯಾಂಕ್ ಆಫ್ ಬರೋಡ ಸಹಯೋಜಿತ ಭತ್ತ ಕೃಷಿ ವಿಶೇಷ ಅಭಿಯಾನ ಕಾರ್ಯಕ್ರಮವು ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಕೇಶವದರ್ಶಿನಿ ಸಭಾಂಗಣದಲ್ಲಿ ಜು.30ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಇದರ ಸಿಇಓ ವಿಶ್ವನಾಥ ಎಸ್ ಪಿ ಮಾತನಾಡಿ, ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂಬಂತೆ ಕೃಷಿ ಇಲ್ಲದ ಬದುಕನ್ನು ಊಹಿಸಲು ಅಸಾಧ್ಯ ನಾವು ನೀವೆಲ್ಲರೂ ಇದರತ್ತ ಒಲವು ಮೂಡಿಸೋಣ ಎಂದರು. ಸಂಪನ್ಮೂಲ ವ್ಯಕ್ತಿ ಪ್ರಗತಿಪರ ಕೃಷಿಕ ಸಂಜೀವ ಪೂಜಾರಿ ಕಾನ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತ ಜ್ಞಾನಕ್ಕಾಗಿ ವಿದ್ಯಾರ್ಥಿನೆಯಾದರೆ, ಆಹಾರಕ್ಕಾಗಿ ಕೃಷಿಯ ಕಡೆಗೂ ಆಸಕ್ತಿ ನೀಡುವುದು ಅವಶ್ಯಕ, ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಒಂದೊಂದು ಭತ್ತ ಹಾಗೂ 9 ಪೈರುಗಳನ್ನು ನೀಡಿ ನೀವು ನಿಮ್ಮದೇ ಆದ ಭತ್ತ ಬೇಸಾಯ ಪ್ರಾರಂಭಿಸಿ ಎಂದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡ ಬೆಟ್ಟಂಪಾಡಿ ಶಾಖೆಯ ಪ್ರಬಂಧಕ ಅನೂಪ್, ಆಡಳಿತ ಮಂಡಳಿಯ ಅಧ್ಯಕ್ಷ ರಂಗನಾಥ ರೈ ಗುತ್ತು ಶಾಲಾ ಮುಖ್ಯ ಗುರು ರಾಜೇಶ್ ಎನ್ ಉಪಸ್ಥಿತರಿದ್ದರು. ವಿಜಯ ಗ್ರಾಮೀಣ ಸಮಿತಿ ಸುಳ್ಯ ಪದವು ಇದರ ಅಧ್ಯಕ್ಷ ಗೋವಿಂದ ಭಟ್ ಸ್ವಾಗತಿಸಿ, ಸಹ ಶಿಕ್ಷಕಿ ರಕ್ಷಿತಾ ವಂದಿಸಿದರು. 9ನೇ ತರಗತಿ ವಿದ್ಯಾರ್ಥಿನಿ ಅನನ್ಯಶ್ರೀ ಪ್ರಾರ್ಥಿಸಿದರು. ಉದಯವಾಣಿ ಪತ್ರಿಕೆಯ ಪತ್ರಕರ್ತ ಮಾಧವ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.