ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ, ಅಂಬಿಕಾ ವಿದ್ಯಾಲಯ (ಸಿಬಿಎಸ್ಸಿ), ಬಪ್ಪಳಿಗೆ ವತಿಯಿಂದ ಜು.29ರಂದು ‘ಆಟಿದ ಬೆನ್ನಿಡ್ ಕೆಸರ್ದ ಗೊಬ್ಬು’ ಕಾರ್ಯಕ್ರಮ ನಡೆಯಿತು.ಪ್ರಗತಿಪರ ಕೃಷಿಕ ಮಾಧವ ಗೌಡ ಕಾಂತಿಲ ಮಾತನಾಡಿ ಇಂದಿನ ಕಾಲಘಟ್ಟದ ಕೃಷಿ ಕಾರ್ಯದಲ್ಲಿ ಗಣನೀಯ ಬದಲಾವಣೆ ಕಂಡಿದ್ದು, ಈ ಬದಲಾವಣೆಯು ಮಾನವರ ಆರೋಗ್ಯದ ಮೇಲೂ ಪ್ರಭಾವ ಬೀರಿದೆ. ಆದುದರಿಂದ ಆಧುನಿಕ ತಂತ್ರಜ್ಞಾನದ ಜೊತೆಗೆ ಸಾಂಪ್ರದಾಯಿಕ ಕೃಷಿ ಪದ್ಧತಿಯ ಪಾಲನೆಯೂ ಅವಶ್ಯಕ ಎಂದರು.
ಪ್ರಾಂಶುಪಾಲೆ ಡಿ.ಮಾಲತಿ ಮಾತನಾಡಿ ಇಂದಿನ ಪೀಳಿಗೆಯ ಜನರು ಆಹಾರ ಪಚನಕ್ರಿಯೆಗಾಗಿ ವ್ಯಾಯಾಮದ ಮೊರೆ ಹೋಗುತ್ತಾರೆ. ಆದರೆ ಹಿಂದಿನ ತಲೆಮಾರಿನವರು ಕೃಷಿ ಕಾರ್ಯದಲ್ಲಿ ನೈಸರ್ಗಿಕವಾಗಿ ವ್ಯಾಯಾಮವನ್ನು ಪಡೆಯುತ್ತಿದ್ದರು ಹಾಗೂ ಆರೋಗ್ಯವಾಗಿದ್ದರು,ಯೋಧನು ದೇಶವನ್ನು ರಕ್ಷಿಸುತ್ತಾನೆ ಅದೇ ರೀತಿ ಕೃಷಿಕನು ದೇಶಕ್ಕೆ ಅನ್ನವನ್ನು ಉಣ ಬಡಿಸುತ್ತಾನೆ ಎಂದು ಹೇಳಿದರು.
ಸಭಾಧ್ಯಕ್ಷ, ಅಂಬಿಕಾ ಸಮೂಹ ಸಂಸ್ಥೆಯ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಸುಬ್ರಹ್ಮಣ್ಯ ನಟೋಜ ಸಭೆಯನ್ನುದ್ದೇಶಿಸಿ ಮಾತನಾಡಿ ಕೋರೊನಾದಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಜಗತ್ತಿಗೆ ಅನ್ನವನ್ನು ನೀಡಿ ಮುನ್ನಡೆಸಿದ ಅನ್ನದಾತನಿಗೆ ಸದಾ ನಾವು ಋಣಿಯಾಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಕೆ. ಮುತ್ತಪ್ಪ ಗೌಡ , ಸಂಸ್ಥೆಯ ಕಾರ್ಯದರ್ಶಿ ರಾಜಶ್ರೀ ನಟ್ಟೋಜ ಹಾಗೂ ಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದ ತನ್ವಿ ರೈ ಹಾಗೂ ಭುವಿ ಕಾರ್ಯಕ್ರಮವನ್ನು ನಿರೂಪಿಸಿದರು.ಶಿವಕೀರ್ತನ್ ಸ್ವಾಗತಿಸಿ, ಸಿಂಚನ ಪಿ ವಂದಿಸಿದರು.