ಕಟ್ಟತ್ತಾರು ಕೆ.ಎಂ. ಯೂಸುಫ್ ನಿಧನ

0

ಪುತ್ತೂರು: ಕೆಯ್ಯೂರು ಗ್ರಾಮದ ಕಟ್ಟತ್ತಾರು ನಿವಾಸಿ ಕೆ.ಎಂ.ಯೂಸುಫ್‌ ಅಲ್ಪ ಕಾಲದ ಅಸೌಖ್ಯದಿಂದಾಗಿ ಜು.2ರಂದು ನಿಧನರಾದರು. ಕಟ್ಟತ್ತಾರ್ ಜುಮಾ ಮಸೀದಿಯ ಆಡಳಿತ ಸಮಿತಿಯಲ್ಲಿ ಹಲವಾರು ವರ್ಷಗಳಿಂದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಇವರು ಪುತ್ರರಾದ ಕೆ.ಎಂ. ಮುಹಮ್ಮದ್ ರಫೀಕ್, ಅಬ್ದುಲ್ ಅಝೀಝ್ ಮತ್ತು ಪುತ್ರಿ ನಜುಮುನ್ನಿಸಾ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕೆ.ಎಂ.ಯೂಸುಫ್‌ ಸುದ್ದಿ ಸಂಸ್ಥೆಯ ಉದ್ಯೋಗಿಯಾಗಿರುವ ಅಶ್ರಫ್ ಕಟ್ಟತ್ತಾರು ಅವರ ಚಿಕ್ಕಪ್ಪರಾಗಿದ್ದಾರೆ. ಜು.2ರಂದು ಸಂಜೆ ಕಟ್ಟತ್ತಾರು ಜುಮಾ ಮಸೀದಿಯಲ್ಲಿ ಮಯ್ಯತ್ ನಮಾಝ್ ನಿರ್ವಹಿಸಿ ಬಳಿಕ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here