ನರಿಮೊಗರು: ರೈಲ್ವೆ ಮಾರ್ಗದ ಬಳಿ ಗುಡ್ಡ ಕುಸಿತ

0

ಸವಣೂರು: ಮಂಗಳೂರು-ಪುತ್ತೂರು-ಬೆಂಗಳೂರು ರೈಲು ಮಾರ್ಗದ ನರಿಮೊಗರು ಬಳಿ ಗುಡ್ಡ ಕುಸಿತ ಉಂಟಾಗಿದೆ.

ನರಿಮೊಗರಿನಲ್ಲಿ ರೈಲ್ವೇ ಮಾರ್ಗದ ಒಂದು ಬದಿಯ ಗುಡ್ಡ ಈಗಾಗಲೇ ರೈಲು ಮಾರ್ಗದ ಮೇಲೆ ಕುಸಿದು ಬಿದ್ದಿದ್ದು, ತೆರವು ಕಾರ್ಯ ನಡೆದಿದೆ. ಈಗ ಮತ್ತೊಂದು ಬದಿಯ ಗುಡ್ಡವೂ ಕುಸಿಯುವ ಆತಂಕ ಉಂಟಾಗಿದೆ.

ಈಗಾಗಲೇ ಮಂಗಳೂರು-ಪುತ್ತೂರು-ಬೆಂಗಳೂರು ರೈಲು ಮಾರ್ಗದ ಎಡಕುಮೇರಿ- ಕಡಗರವಳ್ಳಿ ನಡುವೆ ಮಳೆ ಹಾಗೂ ಗುಡ್ಡ ಕುಸಿತದಿಂದ ಹಾನಿಯಾದ ರೈಲ್ವೆ ಹಳಿ ದುರಸ್ತಿ ಪ್ರಗತಿಯಲ್ಲಿದೆ.

LEAVE A REPLY

Please enter your comment!
Please enter your name here