ಪುತ್ತೂರು ತಾಲೂಕು ಬಂಟರ ಸಂಘದ ಕಾರ‍್ಯಕಾರಿ ಸಮಿತಿ ಸಭೆ

0

ಆಟಿಡೊಂಜಿ ಬಂಟೆರೆ ಸೇರಿಗೆ ಕಾರ‍್ಯಕ್ರಮ ಯಶಸ್ಸಿಗೆ ಬಂಟ ಸಮಾಜದ ಸರ್ವರ ಸಹಕಾರ ಅಗತ್ಯ- ಕಾವು ಹೇಮನಾಥ ಶೆಟ್ಟಿ

ಪುತ್ತೂರು: ತಾಲೂಕು ಬಂಟರ ಸಂಘದ ಕಾರ‍್ಯಕಾರಿ ಸಮಿತಿ ಹಾಗೂ ವಿಶೇಷ ಅಹ್ವಾನಿತರ ಸಭೆಯು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು.

ಬಂಟ ಸಮಾಜದ ಸರ್ವರ ಸಹಕಾರ ಅಗತ್ಯ- ಕಾವು ಹೇಮನಾಥ ಶೆಟ್ಟಿ

ಸಭೆಯ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ಮಾತನಾಡಿ ಆ.10ರಂದು ನಡೆಯಲಿರುವ ಆಟಿಡೊಂಜಿ ಬಂಟೆರೆ ಸೇರಿಗೆ ಕಾರ‍್ಯಕ್ರಮದ ಯಶಸ್ಸಿಗೆ ಬಂಟ ಸಮಾಜದ ಸರ್ವರ ಸಹಕಾರ ಅಗತ್ಯ ಎಂದು ಹೇಳಿದರು.



ಕಾರ‍್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಚಿನ್ನದ ಪದಕ ಪ್ರಶಸ್ತಿ ಪ್ರಧಾನ, ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ, ವಿವಿಧ ಬಗೆಯ ಸಾಂಸ್ಕೃತಿಕ ಕಾರ‍್ಯಕ್ರಮಗಳು ಜರಗಲಿದೆ. ಈ ವಿಶಿಷ್ಟ ಕಾರ‍್ಯಕ್ರಮದ ಅಮಂತ್ರಣ ಪತ್ರ ಅವಿಭಜಿತ ಪುತ್ತೂರು ತಾಲೂಕಿನ ಪ್ರತಿಯೊಬ್ಬ ಬಂಟ ಸಮಾಜ ಭಾಂದವರ ಮನೆ ಮನೆ ತಲುಪುವಂತೆ ಸಂಘದ ನಿರ್ದೇಶಕರುಗಳು ಹಾಗೂ ವಿಶೇಷ ಅಹ್ವಾನಿತರು ಕೆಲಸವನ್ನು ಮಾಡುವ ಮೂಲಕ, ಪುತ್ತೂರಿನಲ್ಲಿ ಅದ್ದೂರಿ ಕಾರ‍್ಯಕ್ರಮಕ್ಕೆ ಸಹಕಾರವನ್ನು ನೀಡಬೇಕು, ಜೊತೆಗೆ ಈ ಕಾರ‍್ಯಕ್ರಮದಲ್ಲಿ ಪೂರ್ತಿಯಾಗಿ ಭಾಗವಹಿಸುವಂತೆ ಸಮಾಜ ಭಾಂದವರರಲ್ಲಿ ಕಾವು ಹೇಮನಾಥ ಶೆಟ್ಟಿಯವರು ವಿನಂತಿಸಿದರು.

ವೇದಿಕೆಯಲ್ಲಿ ಬಂಟರ ಸಂಘದ ನಿಕಟಪೂರ್ವಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಸಹಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ನುಳಿಯಾಲು ಜಗನ್ನಾಥ ರೈ, ದಯಾನಂದ ರೈ ಮನವಳಿಕೆಗುತ್ತು, ಹಿರಿಯರಾದ ಅರಿಯಡ್ಕ ಚಿಕ್ಕಪ್ಪ ನಾೖಕ್‌, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಗೀತಾ ಮೋಹನ್ ರೈ, ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು ಉಪಸ್ಥಿತರಿದ್ದರು. ತಾಲೂಕು ಬಂಟರ ಸಂಘದ ಪ್ರಧಾನ ಕಾರ‍್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ಸ್ವಾಗತಿಸಿ, ಕೋಶಾಧಿಕಾರಿ ಸಂತೋಷ್ ಶೆಟ್ಟಿ ಸಾಜ ವಂದಿಸಿದರು. ಸಮಾರಂಭದಲ್ಲಿ ಬಂಟರ ಸಂಘದ ಉಪಾಧ್ಯಕ್ಷರುಗಳು, ನಿರ್ದೇಶಕರುಗಳು, ವಿಶೇಷ ಆಹ್ವಾನಿತರುಗಳು, ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ಸಂಘದ ಪದಾಧಿಕಾರಿಗಳು ಭಾಗವಹಿಸಿದರು.


ಸಮಾಜ ಭಾಂದವರ ಸಮೀಕ್ಷೆ ಶೇ.100 ಆಗಬೇಕು

ಅವಿಭಜಿತ ಪುತ್ತೂರು ತಾಲೂಕಿನಲ್ಲಿ ವಾಸಿಸುವ ಪ್ರತಿ ಮನೆಯ ಬಂಟ ಸಮಾಜ ಭಾಂದವರ ಪೂರ್ಣ ವಿವರ ಕ್ರೂಢಿಕರಣ ಆಗಬೇಕು, ಅಮೂಲಕ ಸಮಾಜ ಭಾಂದವರ ಪೂರ್ಣ ವಿವರ ಸಿಗುತ್ತದೆ. ಆದುದರಿಂದ ಬಂಟ ಸಮಾಜ ಭಾಂದವರ ಸಮೀಕ್ಷೆ ಶೇ.100 ಆಗುವಂತೆ ಎಲ್ಲರೂ ಸಹಕಾರವನ್ನು ನೀಡಬೇಕಾಗಿ ವಿನಂತಿ
ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷರು ಬಂಟರ ಸಂಘ ಪುತ್ತೂರು ತಾಲೂಕು

LEAVE A REPLY

Please enter your comment!
Please enter your name here