ಮುಕ್ರಂಪಾಡಿ: ಕೆಸರಿನಲ್ಲಿ ಹೂತು ಹೋದ ಪಿಕಪ್

0

ಪುತ್ತೂರು: ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಮುಕ್ರಂಪಾಡಿ ಎಂಬಲ್ಲಿ ಪಿಕಪ್ ವಾಹನವೊಂದು ರಸ್ತೆ ಬದಿಯ ಕೆಸರಿನಲ್ಲಿ ಹೂತು ಹೋದ ಘಟನೆ ಆ.5 ರಂದು ಮಧ್ಯಾಹ್ನ ನಡೆದಿದೆ.

ಕೆಎ37ಬಿ6099 ನಂಬರಿನ ಬಳ್ಳಾರಿ ಮೂಲದ ಖಾಲಿ ಇರುವ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಕೆಸರಿನಲ್ಲಿ ಹೂತು ಹೋಗಿತ್ತು. ಮೊಟ್ಟೆತ್ತಡ್ಕ ಸೌಹಾರ್ದ ಪಿಕಪ್ ವಾಹನ ಚಾಲಕ ಆದಂರವರ ತಂಡವು ಪಿಕಪ್ ವಾಹನವನ್ನು ಮತ್ತೊಂದು ಪಿಕಪ್ ವಾಹನದ ಮೂಲಕ ಮೇಲಕ್ಕೆತ್ತಿದ್ದರು.

LEAVE A REPLY

Please enter your comment!
Please enter your name here