ಪುತ್ತೂರು: ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಪುತ್ತೂರು ಇದರ ವತಿಯಿಂದ ಶ್ರೀ ಒಡಿಯೂರು ಗ್ರಾಮ ವಿಕಾಸ ಯೋಜನೆ, ವಜ್ರಮಾತಾ ವಿಕಾಸ ಕೇಂದ್ರ, ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರು,ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಭಾಗಿತ್ವದೊಂದಿಗೆ ಒಡಿಯೂರು ಶ್ರೀಗಳ 63ನೇ ಹುಟ್ಟು ಹಬ್ಬದ ಪ್ರಯುಕ್ತ ಗ್ರಾಮೋತ್ಸವದ ಸಲುವಾಗಿ ರಕ್ತದಾನ ಶಿಬಿರ ಆ.5ರಂದು ಪುತ್ತೂರು ಲಯನ್ ಸೇವಾ ಸದನದಲ್ಲಿ ನಡೆಯಿತು.
ಉದ್ಘಾಟನೆಯನ್ನು ನೆರವೇರಿಸಿದ ಮಾಜಿ ನಗರಸಭಾ ಅದ್ಯಕ್ಷ , ಒಡಿಯೂರು ಕೇಂದ್ರ ಸಮಿತಿಯ ತುಳುನಾಡ ರಥೋತ್ಸವದ ಕಾರ್ಯಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ ಪ್ರತಿಯೊಬ್ಬ ಗುರುಬಂಧುಗಳು ಸ್ವಾಮಿಜಿಯವರ ಆಶಯವನ್ನು ಈಡೇರುಸುವಲ್ಲಿ ನಿಶ್ವಾರ್ಥವಾಗಿ ರಕ್ತದಾನ ಮಾಡಿ ಜೀವ ಉಳಿಸುವಲ್ಲಿ ಸಹಕರಿಸಬೇಕೆಂದರು.
ಅಧ್ಯಕ್ಷತೆಯನ್ನು ವಹಿಸಿದ ಲಯನ್ ಕ್ಲಬ್ ಅಧ್ಯಕ್ಷೆ ಪ್ರೇಮಲತಾ ರಾವ್ ಮಾತನಾಡಿ ಎಲ್ಲಾ ದಾನಕ್ಕಿಂತಲೂ ಶ್ರೇಷ್ಠದಾನ ರಕ್ತದಾನ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ರೋಟರಿ ಕ್ಲಬ್ ನ ಡಾ. ಸೀತಾ ರಾಮ್ ಭಟ್ ಮಾತನಾಡಿ ರಕ್ತದಾನದ ಮಹತ್ವ ತಿಳಿಸಿದರು. ಮುಖ್ಯ ಅತಿಥಿ ಗುರುದೇವಾ ಸೇವಾ ಬಳಗದ ಅಧ್ಯಕ್ಷ ಸುದೀರ್ ನೋಂಡ, ಸ್ನೇಹ ಸುಗಮ ರಿಕ್ಷಾ ಯೂನಿಯನ್ ಕಾರ್ಯದರ್ಶಿ ಶಶಿಧರ ಸಿಟಿಗುಡ್ಡೆ, ಒಡಿಯೂರು ಗ್ರಾಮ ವಿಕಾಸ ಯೋಜನೆ ಮೇಲ್ವಿಚಾರಕಿ ಸವಿತಾ ರೈ, ಲಯನ್ ಕೋಶಾಧಿಕಾರಿ ಸುಧಾಕರ್ ಸಂದರ್ಭೋಚಿತವಾಗಿ ಮಾತನಾಡಿದರು.
ವೇದಿಕೆಯಲ್ಲಿ ಲಯನ್ ಜಯಶ್ರೀ ಶೆಟ್ಟಿ, ಲಯನ್ ಶಾರದ, ಲಯನ್ ಭವಾನಿ ಶಂಕರ್ ಶೆಟ್ಟಿ, ರಿಕ್ಷಾ ಯೂನಿಯನ್ ಮಾಜಿ ಕಾರ್ಯದರ್ಶಿ ತಾರನಾಥ್ ಉಪಸ್ಥಿತರಿದ್ದರು. ಗ್ರಾಮ ವಿಕಾಸದ ಸಂಯೋಜಕಿ ಮಹಿತಾ ರೈ, ಸೇವಾ ದೀಕ್ಷಿತೆ ಸುಜಾತ, ಅಶ್ವಿನಿ, ಸುನಂದಾ, ಪ್ರತಿಭಾ ಪ್ರಾರ್ಥಿಸಿ,ಸಂಯೋಜಕಿ ಜಯಂತಿ ಸ್ವಾಗತಿಸಿ ,ಲಯನ್ ಕಾರ್ಯದರ್ಶಿ ಅರವಿಂದ ಭಗವಾನ್ ರೈ ವಂದಿಸಿ, ಗುರುಸೇವಾ ಬಳಗದ ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ರಿಕ್ಷಾ ಯೂನಿಯನ್ ಹಾಗೂ ಗ್ರಾಮವಿಕಾಸ ಯೋಜನೆಯ ಸದಸ್ಯರಾದ ಉದಯ, ಚಂದ್ರಶೇಖರ್ ಈಶ್ವರಮಂಗಲ,ಮಂಜುನಾಥ್ ರವಿಚಂದ್ರ, ಚಂದ್ರಶೇಖರ್ ಪುತ್ತೂರು, ಶೇಷಪ್ಪ, ಹರೀಶ್ ಕುಮಾರ್, ಯಾದವ, ರಮೇಶ್ ಕಾವು, ಮಹಿತಾ ರೈ, ಇಮ್ರಾನ್ ಅಹಮದ್, ನವೀನ್, ತೀರ್ಥರಾಮ್, ಶಶಿಧರ ಸಿಟಿಗುಡ್ಡೆ, ಅರುಣ್ ಪ್ರಕಾಶ್ ಪಾಯಸ್, ಚಂದ್ರಶೇಖರ್ ಡ್ರೈವರ್ ಇರ್ದೆ, ಲಕ್ಷ್ಮೀನಾರಾಯಣ ಪಿ, ಮೊದಲಾದವರು ರಕ್ತದಾನ ಮಾಡಿದರು.