ಪುತ್ತೂರು:ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅದ್ವಿತೀಯ ಸಾಧನೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ನೀಡಲ್ಪಡುವ ಪ್ರಶಸ್ತಿಗೆ ಸತತ 6ನೇ ಬಾರಿಗೆ ಆಯ್ಕೆಯಾಗಿದೆ.
111 ವರ್ಷಗಳ ಇತಿಹಾಸವಿರುವ ಸಂಘವು ಆನಾಜೆ ಹಾಗೂ ಕೈಂದಾಡಿಯಲ್ಲಿ ಶಾಖೆಯನ್ನು ಹೊಂದಿದೆ. ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿಯನ್ನು ಕಂಡಿದೆ .2023-24ನೇ ಸಾಲಿನಲ್ಲಿ ಸಂಘವು 2023-24ನೇ ಆರ್ಥಿಕ ವರ್ಷದಲ್ಲಿ ಆಡಿಟ್ ಪೂರ್ವ ಅಂಕಿ ಅಂಶಗಳ ಪ್ರಕಾರ ಸಂಘವು ವರ್ಷಾಂತ್ಯಕ್ಕೆ ರೂ.419 ಕೋಟಿ ವ್ಯವಹಾರ ನಡೆಸಿ ರೂ.2.45 ಕೋಟಿ ಅಡಿಟ್ ಪೂರ್ವ ಲಾಭ ಗಳಿಸಿದೆ. ಸಂಘದ ಇತಿಹಾಸದಲ್ಲಿಯೇ ದಾಖಲೆಯ ಲಾಭಗಳಿಸಿದೆ.. ಸಂಘವು ವರದಿ ವರ್ಷದಲ್ಲಿ 4,714 ಮಂದಿ ಸದಸ್ಯರಿಂದ ರೂ.6,06,53,000 ಪಾಲು ಬಂಡವಾಳ ಹೊಂದಿದೆ.ರೂ.2,73,81,830 ಕ್ಷೇಮ ನಿಧಿ, ರೂ.45,45,56,331 ಠೇವಣಿಗಳನ್ನು ಹೊಂದಿದೆ.ರೂ.78,09,56,688 ಸಾಲ ವಿತರಿಸಲಾಗಿದೆ. ರೂ.43,57,08,058 ಬ್ಯಾಂಕ್ ಸಾಲ ಹೊಂದಿದೆ. ಒಟ್ಟು ರೂ.419 ಕೋಟಿ ವ್ಯವಹಾರ ನಡೆಸಿ ರೂ.2,44,99,504 ಲಾಭಗಳಿಸಿದೆ. ಶೇ.96.60 ಸಾಲ ವಸೂಲಾತಿ ಮಾಡಿರುತ್ತದೆ.
ಸಂಘದ ಸದಸ್ಯರ ಅನುಕೂಲಕ್ಕಾಗಿ ಕೈಂದಾಡಿ ಶಾಖೆಯನ್ನು ನವೀಕರಣಗೊಳಿಸಿ ಅಲ್ಲಿ ಬ್ಯಾಂಕಿAಗ್ ಸೇವೆ ಆರಂಭಿಸಲಾಗಿದೆ. ಸುರಕ್ಷತೆಯ ದೃಷ್ಠಿಯಿಂದ ಪ್ರಧಾನ ಕಚೇರಿಯ ಎಲ್ಲಾ ವಿಭಾಗಗಳು ಹಾಗೂ ಆನಾಜೆ ಮತ್ತು ಕೈಂದಾಡಿ ಶಾಖೆಗೆ ಸಿಸಿಟಿವಿ ಅಳವಡಿಸಲಾಗಿದೆ. ನಿರಖು ಠೇವಣಿಯ ಬಡ್ಡಿ ದರವನ್ನು ಶೇ.ಅರ್ಧದಷ್ಟು ಏರಿಕೆ ಮಾಡಲಾಗಿದೆ.ಆರ್‌ಡಿಗೆ ಶೇ.7 ಬಡ್ಡಿದರ ನೀಡಲಾಗುತ್ತಿದೆ. ರೈತರಿಗಾಗಿ ಕೃಷಿ ಸಲಕರಣೆಗಳ ಮಾರಾಟ ಕೇಂದ್ರ ಪ್ರಾರಂಭಿಸಲಾಗಿದೆ.ಸದಸ್ಯರಿಗೆ ಆರು ತಿಂಗಳ ಅವಧಿಗೆ, 1 ತಿಂಗಳ ಬಡ್ಡಿ ರಹಿತ ರಸಗೊಬ್ಬರ ಸಾಲ ನೀಡಲಾಗುತ್ತಿದೆ.ಸಾರ್ವಜನಿಕರ ಅನುಕೂಲಕ್ಕಾಗಿ ಶವ ಸುಡುವ ಪೆಟ್ಟಿಗೆಯನ್ನು ಉಚಿತವಾಗಿ ನೀಡಲಾಗುತ್ತಿದೆ.ಸಾಲಗಾರ ಸದಸ್ಯರಿಗೆ ರೂ.5000 ಮರಣ ಸಾಂತ್ವನ ನಿಧಿ ಹಾಗೂ ರೂ.2 ಲಕ್ಷದ ಉಚಿತ ಅಪಘಾತ ವಿಮೆಯನ್ನು ಪ್ರಾರಂಭಿಸಲಾಗಿದೆ.
ಸಂಘದ ಅಧ್ಯಕ್ಷರಾಗಿ ನವೀನ್ ಡಿ., ಉಪಾಧ್ಯಕ್ಷೆಯಾಗಿ ಪವಿತ್ರ ಕೆ.ಪಿ., ನಿರ್ದೇಶಕರಾಗಿ ವಿಶ್ವನಾಥ ಬಲ್ಯಾಯ, ಪ್ರವೀಣ್ ಶೆಟ್ಟಿ, ದೇವಪ್ಪ ಪಿ., ಜಯರಾಮ ಪೂಜಾರಿ, ದೇವಪ್ಪ ಗೌಡ, ನಮಿತಾ, ಚಂದ್ರ, ವಿ. ಬಾಬು ಶೆಟ್ಟಿ, ಪರಮೇಶ್ವರ ಭಂಡಾರಿ, ಶಿವಪ್ರಸಾದ್ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಧುಕರ್ ಎಚ್. ಹಾಗೂ ಸಿಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಧ್ಯಕ್ಷ ನವೀನ್ ಡಿ. ತಿಳಿಸಿದ್ದಾರೆ.
ಸಂಘವು ಉತ್ತಮ ಸಾಧನೆ ಮಾಡಿದ್ದು ರೂ.2.45 ಕೋಟಿ ದಾಖಲೆಯ ಲಾಭ ಗಳಿಸಿದೆ. ಉತ್ತಮ ವ್ಯವಹಾರ ನಡೆಸಿ, ವಸೂಲಾತಿಯಲ್ಲೂ ಸಾಧನೆ ಮಾಡಿದೆ. ಸಂಘದ ಸಾಧನೆಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 6ನೇ ಬಾರಿಗೆ ಪ್ರಶಸ್ತಿ ನೀಡುತ್ತಿದೆ. ಶೇ.100 ಸಾಲವಸೂಲಾತಿಯೇ ಮುಂದಿನ ಗುರಿಯಾಗಿದೆ. ಸಂಘದ ಸಾಧನೆ ಸಂತಸ ತಂದಿದೆ. ಸಂಘದ ಸಾಧನೆಗೆ ಕಾರಣಕರ್ತರಾದ ಆಡಳಿತ ಮಂಡಳಿ, ಸದಸ್ಯರಿಗೆ, ಗ್ರಾಹಕರಿಗೆ ಹಾಗೂ ಸಿಬಂದಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸಂಘದ ಅಧ್ಯಕ್ಷ ನವೀನ್ ಡಿ. ತಿಳಿಸಿದ್ದಾರೆ.