ಪುತ್ತೂರು: ಪುತ್ತೂರು ನಗರ ಸಭೆಯ ವಾರ್ಡ್ 19 (ಪರ್ಲಡ್ಕ- ದರ್ಬೆ- ಪಾಂಗಲಾೖ) ಕ್ಕೆ ಸಂಬಂಧಿಸಿದಂತೆ ಆ.8ರಂದು ಪರ್ಲಡ್ಕ ಸರಕಾರಿ ಶಾಲೆಯಲ್ಲಿ, ಪುತ್ತೂರು ಜಲಸಿರಿ ಯೋಜನೆಯ ಬಗ್ಗೆ ಸಮಾಲೋಚನ ಸಭೆ ನಡೆಯಿತು. ವಾರ್ಡ್ ಜನಪ್ರತಿನಿಧಿ ವಿದ್ಯಾ ಗೌರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಲಸಿರಿ ಯೋಜನೆಯ ಅಧಿಕಾರಿಗಳು ಭಾಗವಹಿಸಿದ್ದು, ನೀರಿಗೆ ಸಂಬಂಧಪಟ್ಟಂತೆ ಸ್ಥಳೀಯರೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಹೊಸ ಕನೆಕ್ಷನ್ ನೀಡುವ ಬಗ್ಗೆ, ಹಳೆ ಕನೆಕ್ಷನ್ ಗಳಿಗೆ ನೀರಿನ ಪ್ರಷರ್ ಇಲ್ಲದೆ ಸರಿಯಾಗಿ ನೀರು ಬರದಿರುವ ಬಗ್ಗೆ ,ರೋಡ್ ಕಟ್ಟಿಂಗ್ ಮಾಡುವ ಬಗ್ಗೆ, ಕಟ್ಟಿಂಗ್ ಮಾಡಿದ್ದು ಸರಿಯಾಗಿ ಮತ್ತೆ ಮುಚ್ಚದೆ ಇರುವ ಅಪಾಯಕಾರಿ ಹೊಂಡಗಳ ಬಗ್ಗೆ, ಕೆಲವು ಕಡೆಗಳಲ್ಲಿ ಲೀಕೇಜ್ ನಿಂದ ನೀರು ವ್ಯರ್ಥವಾಗುವ ಬಗ್ಗೆ ಚರ್ಚೆ ನಡೆಸಲಾಯಿತು.ಪ್ರಸ್ತುತ ಇರುವ ಬೋರ್ ವೆಲ್ ಕನೆಕ್ಷನ್ ಗಳನ್ನು ಮುಚ್ಚದಂತೆ ಮತ್ತು ರಿಪೇರಿ ಮಾಡಿಸುವ ಬಗ್ಗೆ, ನೀರಿನ ಹೊಸ ಮೀಟರ್ ಮತ್ತು ಬಿಲ್ ನಲ್ಲಿ ದೋಷ ಕಂಡುಬರುವ ಬಗ್ಗೆ, ಮತ್ತು ಜಲಸಿರಿ ಕಚೇರಿಯಲ್ಲಿ ದೂರು ದಾಖಲಿಸಲು ಇರುವ ತಾಂತ್ರಿಕ ದೋಷ ಬಗೆಹರಿಸುವ ವಾರ್ಡಿನ ಸದಸ್ಯರು ತಮ್ಮ ಅನಿಸಿಕೆಗಳನ್ನು ಸಭೆಯ ಮುಂದಿಟ್ಟರು. ಈ ಕಾರ್ಯಕ್ರಮದಲ್ಲಿ ಇಂಜಿನಿಯರ್ ಗೌತಮ್, ಜಲಸಿರಿಯ ಅಧಿಕಾರಿಗಳಾದ ಉಸ್ಮಾನ್, ಸಂತೋಷ್, ಪರಂ, ಅಭಿಷೇಕ ಹಾಗೂ ವಾರ್ಡಿನ ನಿವಾಸಿಗಳು ಭಾಗವಹಿಸಿದ್ದರು.