ಕಾಣಿಯೂರು : ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಆಟಿದ ಕೂಟ ಕಾರ್ಯಕ್ರಮವು ಆ 10ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಶಾಲಾ ಸಂಚಾಲಕ ಜಯಸೂರ್ಯ ರೈ ಮಾದೋಡಿಯವರು ದೀಪ ಬೆಳಗಿಸಿ, ಚೆನ್ನೆಮಣೆ ಆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಆಟಿಕೂಟದ ವಿಶೇಷತೆಯ ಬಗ್ಗೆ, ಹಿರಿಯರ ಕಷ್ಟದ ಬದುಕಿನ ಬಗ್ಗೆ ವಿವರಿಸುತ್ತಾ ಶುಭ ಹಾರೈಸಿದರು. ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ದಿವೀಶ್ ಮುರುಳ್ಯ ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಮುಖ್ಯ ಅತಿಥಿ ಪ್ರಸಾದ್ ಅಂಚನ್ ಯೆಯ್ಯಾಡಿ, ಮಂಗಳೂರು ಇವರು ಮಾತನಾಡಿ, ಆಟಿ ತಿಂಗಳಲ್ಲಿ ತುಳುವರ ಸಂಸ್ಕೃತಿ, ಪ್ರಕೃತಿ ಆರಾಧನೆಗೆ ಹಿರಿಯರು ಯಾವ ರೀತಿಯ ಕಾಣಿಕೆ ನೀಡಿದ್ದಾರೆ ಎನ್ನುವುದನ್ನು ಬಹಳ ಸವಿವರವಾಗಿ ತಿಳಿಸಿ ಮುಂದಿನ ಪೀಳಿಗೆಯೂ ಅದನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸಬೇಕು ಎಂದರು.
ಇನ್ನೋರ್ವ ಅತಿಥಿ ಸಂಸ್ಥೆಯ ಆಡಳಿತ ಮಂಡಳಿಯ ಕೋಶಾಧಿಕಾರಿ ಉದಯ ರೈ ಮಾದೋಡಿಯವರು ಜನರ ಜೀವನ ಮೌಲ್ಯಗಳ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ವೇದಿಕೆಯಲ್ಲಿ ಶಾಲಾಡಳಿತ ಮಂಡಳಿಯ ಸ್ಥಾಪಕಾಧ್ಯಕ್ಷ ಶ್ರೀಧರ ರೈ ಮಾದೋಡಿ , ಟ್ರಸ್ಟಿಗಳಾದ ವೃಂದಾ ಜೆ ರೈ, ಹರಿಚರಣ್ ರೈ ಮಾದೋಡಿ ,ಆಂಗ್ಲ ಮಾಧ್ಯಮದ ಮುಖ್ಯೋಪಾಧ್ಯಾಯ ನಾರಾಯಣ ಭಟ್, ಸಹ ಆಡಳಿತಾಧಿಕಾರಿ ಹೇಮಾನಾಗೇಶ್ ರೈ ಮಾಳ. ಸಹಮುಖ್ಯಗುರು ಅನಿತಾ ಜೆ ರೈ ಹಾಗೂ ಹಿರಿಯ ಶಿಕ್ಷಕಿ ಸವಿತಾ.ಕೆ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಮಾನ್ವಿ ಜಿ ಎಸ್ ,ರಾಶಿ ಕೆ ಸಿ , ಅನುಶ್ರೀ ಎ ಎಂ , ಗ್ರೀಷ್ಮ ರೈ, ಶ್ರದ್ಧಾ ಕೆ ಡಿ ಪ್ರಾರ್ಥಿಸಿದರು.
ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ಪ್ರಾಸ್ತಾವಿಕ ಮಾತಿನೊಂದಿಗೆ ಸರ್ವರನ್ನು ಸ್ವಾಗತಿಸಿದರು. ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ ಶೆಟ್ಟಿ ವಂದಿಸಿದರು. ಶಿಕ್ಷಕರಾದ ಅಶೋಕ್ ಕುಮಾರ್ ಪಿ ಮತ್ತು ಕವಿತ ವಿ ರೈ ಕಾರ್ಯಕ್ರಮ ನಿರೂಪಿಸಿದರು. ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳು ಆಟಿ ತಿಂಗಳಲ್ಲಿ ಅಡುಗೆ ಮಾಡುವಂತಹ ವಿವಿಧ ವಸ್ತುಗಳನ್ನು ತಂದರೆ , ಶಿಕ್ಷಕವೃಂದದವರು ಆಟಿ ತಿಂಗಳಲ್ಲಿ ಮಾಡುವಂತಹ ವಿಶೇಷ ಖಾದ್ಯಗಳನ್ನು ಮನೆಯಲ್ಲಿಯೇ ಮಾಡಿ ತಂದು ಸಹಭೋಜನ ಮಾಡಲಾಯಿತು.