ಪುಂಜಾಲಕಟ್ಟೆ : ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿಯಲ್ಲಿ ತುಳುನಾಡ ವೈಭವ , ತುಳುವ ಸಂಸ್ಕೃತಿಯ ಬಿಂಬಿಸುವ ತುಳು ಆಚರಣೆ “ಆಟಿದ ಗಮ್ಮತ್ತ್” ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅತಿಥಿಗಳು ಮುಟ್ಟಾಳೆ ಧರಿಸುವುದರ ಮೂಲಕ ಉದ್ಘಾಟನೆಗೊಂಡಿತು.
ಅಧ್ಯಕ್ಷತೆಯನ್ನು ವಾಮದಪದವು ವಲಯ ಮಟ್ಟದ ಸ್ಕೌಟ್ಸ್ ಗೈಡ್ಸ್ ಅಧ್ಯಕ್ಷ ಆನಂದ ಆಚಾರ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಜೈನ್, ವರದಿಗಾರ ಶಬೀರ್ ಅಹ್ಮದ್,ಸಂಚಾಲಕ ಶೇಖ್ ರಹ್ಮತ್ತುಲ್ಲಾಹ್, ಮುಖ್ಯ ಶಿಕ್ಷಕಿ ಜಯಶ್ರೀ.ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನೃತ್ಯ,ಗಾದೆ ಮುಖಾಂತರ ವಿದ್ಯಾರ್ಥಿಗಳು ಎಲ್ಲರ ಮನರಂಜಿಸಿದರು. ನಂತರ ವಿದ್ಯಾರ್ಥಿಗಳು ತಂದ ಆಟಿ ತಿಂಗಳ ವಿಶೇಷ ಅಡುಗೆಯಾದ ಪತ್ರೊಡೆ, ಉಪ್ಪಡಚ್ಚಿಲ್,ತಂಜಕ್ ದೋಸೆ, ಬಗೆಬಗೆಯ ಚಟ್ನಿ ಹಲವಾರು ರೀತಿಯ ತಿಂಡಿ ತಿನಿಸುಗಳನ್ನು ಸವಿಯಲಾಯಿತು. ಹಿಂದಿನ ಕಾಲದ ಪರಿಕರಗಳನ್ನು ಪ್ರದರ್ಶನದಲ್ಲಿ ಜೋಡಣೆ ಮಾಡಲಾಗಿತ್ತು.
ವನಿತಾ ಸ್ವಾಗತಿಸಿದರು.ಪವಿತ್ರಾ ಧನ್ಯವಾದ ಅರ್ಪಿಸಿ, ಎಸ್.ಪಿ. ರಝೀಯ ಕಾರ್ಯಕ್ರಮ ನಿರೂಪಿಸಿದರು.