ಪುತ್ತೂರು: ಸತತ 3ನೇ ಬಾರಿಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಸಾಧನ ಪ್ರಶಸ್ತಿ ಪಡೆದು ಕೊಂಡ ಪುತ್ತೂರು, ಕಡಬ, ಬಂಟ್ವಾಳ ತಾಲೂಕು ಸಹಿತ 10 ಶಾಖೆಗಳನ್ನು ಹೊಂದಿರುವ ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು ಈ ಭಾರಿ ಸಾಧನ ಪ್ರಶಸ್ತಿಯೊಂದಿಗೆ ಪ್ರಥಮ ಬಾರಿಗೆ ಚಿನ್ನದ ಪದಕವನ್ನೂ ಪಡೆದುಕೊಂಡಿದೆ.
ತನ್ನ ಕಾರ್ಯವ್ಯಾಪ್ತಿಯಲ್ಲಿ ಸಾಧಿಸಿರುವ ವಿಶಿಷ್ಟ ಸಾಧನೆ ’ಸಾಧನ ಪ್ರಶಸ್ತಿ’ಯನ್ನು ಪಡೆದು ಕೊಂಡರೆ ಸಂಘವು ರೂ.103 ಕೋಟಿ ಡೆಪೋಸಿಟ್ ಮತ್ತು ರೂ. 542 ಕೋಟಿ ದಾಖಲೆಯ ವ್ಯವಹಾರ ಮಾಡಿದ ನಿಟ್ಟಿನಲ್ಲಿ ಸಂಘಕ್ಕೆ ಚಿನ್ನದ ಪದಕವನ್ನೂ ಪ್ರದಾನ ಮಾಡಲಾಗಿದೆ.
ಆ.14ರಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಮಹಾಸಭೆಯಲ್ಲಿ ಅಧ್ಯಕ್ಷ ಡಾ| ಎಮ್.ಎನ್.ರಾಜೇಂದ್ರ ಕುಮಾರ್ ಅವರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ ಅವರನ್ನು ಸನ್ಮಾನಿಸಿ ಪ್ರಶಸ್ತಿ ಮತ್ತು ಚಿನ್ನದ ಪದಕವನ್ನು ಪ್ರದಾನ ಮಾಡಿದರು. ಈ ಸಂದರ್ಭ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಬಳಜ್ಜ, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ರಾಮಕೃಷ್ಣ ಗೌಡ ಕರ್ಮಲ, ಲೋಕೇಶ್ ಚಾಕೋಟೆ, ಸತೀಶ್ ಪಾಂಬಾರು, ಜಿನ್ನಪ್ಪ ಗೌಡ ಮಳುವೇಲು ಮತ್ತು ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ್ ಗೌಡ ಕಣಜಾಲು ಅವರು ಉಪಸ್ಥಿತರಿದ್ದರು.