ಬೆಟ್ಟಂಪಾಡಿ: ಪ್ರಿಯದರ್ಶಿನಿ ವಿದ್ಯಾಸಂಸ್ಥೆ ವಿದ್ಯಾಗಿರಿ ಬೆಟ್ಟಂಪಾಡಿ ಇಲ್ಲಿ 2024- 25ನೇ ಸಾಲಿನ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪೂರ್ವಭಾವಿ ಸಭೆ ಆ.13ರಂದು ನಡೆಯಿತು.
ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಹೊಳ್ಳ ತೋಟದ ಮೂಲೆ ಇವರು ಆಯ್ಕೆಗೊಂಡು, ಉಪಾಧ್ಯಕ್ಷರುಗಳಾಗಿ ಸನತ್ ರೈ ಕುಂಜಾಡಿ, ಆದಿತ್ಯ ಘಾಟೆ ದರ್ಬೆ, ಜಯಲಕ್ಷ್ಮಿ ಗುಮ್ಮಟಗದ್ದೆ ಹಾಗೂ ರಾಧಾಕೃಷ್ಣ ಬಳ್ಳಿತ್ತಡ್ಡ ಮತ್ತು ಕಾರ್ಯದರ್ಶಿಯಾಗಿ ಶಾಲಾ ಮುಖ್ಯಗುರುಗಳಾದ ರಾಜೇಶ್ ನೆಲ್ಲಿತ್ತಡ್ಕ ಆಯ್ಕೆಗೊಂಡಿರುತ್ತಾರೆ.
ಮಾರ್ಗದರ್ಶನ ಸಮಿತಿ ಸಂಚಾಲಕರಾಗಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು, ಶಾಲಾ ಸಂಚಾಲಕ ಡಾ. ಸತೀಶ್ ರಾವ್, ಅರವಿಂದ ಭಟ್ ದರ್ಬೆ, ಶುಭಕರ ರೈ ಬೈಲಾಡಿ, ಪ್ರಕಾಶ್ ರೈ ಬೈಲಾಡಿ, ಕರುಣಾಕರ ಶೆಟ್ಟಿ ಕೊಮ್ಮಂಡ, ಶ್ರೀನಿವಾಸ್ ಭಟ್ ದೇವಸ್ಯ ಆಯ್ಕೆಗೊಂಡು, ಕ್ರೀಡಾ ಸಂಚಾಲಕರಾಗಿ ಜಗನ್ನಾಥ ರೈ ಕೊಳಂಬೆತ್ತಿ ಮಾರು, ಮೋಹನ ಜೋಗಿ ಮೂಲೆ ಹಾಗೂ ಸವಿತಾ ಕೋನಡ್ಕ, ಸಾಂಸ್ಕೃತಿಕ ಸಮಿತಿ ಸದಸ್ಯರಾಗಿ ಸತೀಶ್ ರೈ ಕಟ್ಟಾವು, ಮಹೇಶ್ ಭಟ್ ಕಜೆ ಹಾಗೂ ಸಂಧ್ಯಾ ಕಾಟುಕುಕ್ಕೆ, ಮೆರವಣಿಗೆ ಸಮಿತಿ ಸಂಚಾಲಕರಾಗಿ ಪ್ರದೀಪ್ ರೈ ನುಳಿಯಾಲು, ಚೈತ್ರ ಕಾನ, ಶುಭಲತಾ ಕಾನ, ಪ್ರಗತಿ ಎಡಮೊಗರು, ಗೀತಾ ಎಡಮೊಗರು, ಮಾಲತಿ ಪರ್ಪುಂಜ, ಆಯ್ಕೆಗೊಂಡರು.
ಊಟೋಪಚಾರ ಸಮಿತಿ ಸದಸ್ಯರಾಗಿ ಶಾಲಿನಿ ಪಳಂಬೆ, ಸ್ವಾತಿ ನಿಡ್ಪಳ್ಳಿ, ದಿಶಾ ಚೇತನ್ ಒಡ್ಯ, ದೀಪ್ತಿ ತಲಪಾಡಿ, ತುಳಸಿ ರೆಂಜ ಆಯ್ಕೆಗೊಂಡು, ಅಲಂಕಾರ ಸಮಿತಿ ಸದಸ್ಯರಾಗಿ ಗಾಯತ್ರಿ ನಿಡ್ಪಳ್ಳಿ, ಸವಿತಾ ಕೋನಡ್ಕ, ಚಿತ್ರಕಲಾ ಬೊಳುಂಬುಡೆ, ರಜನಿ ಮೇಗಿನ ಮನೆ ಆಯ್ಕೆಗೊಂಡಿರುತ್ತಾರೆ. ಹಾಗೂ ಪ್ರಾಚ್ಯ ವಸ್ತುಗಳ ಪ್ರದರ್ಶನದ ಜವಾಬ್ದಾರಿಯನ್ನು ಗಿರೀಶ್ವರ ಭಟ್ ಬಾಳೆಗುಳಿ, ರಾಜೇಶ್ವರಿ ಮಂಜುಳಗಿರಿ ಕೋನಡ್ಕ, ಪುಷ್ಪಲತಾ ಎ ಜಿ ಭಟ್ ಅಡ್ಯೆತ್ತಿಮಾರು, ಶ್ರೀಮತಿ ಪರ್ಪುಂಜ, ಹೇಮಾವತಿ ಕೌಡಿಚ್ಚಾರು ಇವರು ವಹಿಸಿಕೊಂಡಿರುತ್ತಾರೆ. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಸರ್ವರ ಸಹಕಾರ ಯಾಚಿಸಿದರು. ಮುಖ್ಯಗುರು ರಾಜೇಶ್ ನೆಲ್ಲಿತಡ್ಕ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.