ಪುತ್ತೂರು: ಕೋರ್ಟ್ ರಸ್ತೆ ಮಹಮ್ಮಾಯ ದೇವಸ್ಥಾನದ ಬಳಿಯ ಚೇತನಾ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಸಹಯೋಗದಿಂದ ಉಚಿತ HBA1C, ನ್ಯುರೋಪತಿ ತಪಾಸಣಾ ಶಿಬಿರವ ಆ.13 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜರಗಿತು.
ತಪಾಸಣಾ ಶಿಬಿರಕ್ಕೆ ಆಗಮಿಸಿದ ಫಲಾನುಭವಿಗಳಿಗೆ ಆಸ್ಪತ್ರೆ ವೈದ್ಯ ಡಾ.ಜೆ.ಸಿ ಅಡಿಗರವರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್, ಕಾರ್ಯದರ್ಶಿ ದಾಮೋದರ್ ಕೆ, ಸಮುದಾಯ ಸೇವಾ ನಿರ್ದೇಶಕ ರಾಜ್ ಗೋಪಾಲ್ ಬಲ್ಲಾಳ್, ಹಿರಿಯ ಸದಸ್ಯ ಸುರೇಶ್ ಶೆಟ್ಟಿ, ಆಸ್ಪತ್ರೆ ಮ್ಯಾನೇಜರ್ ನೋಯಲ್ ಡಿ’ಸೋಜ, ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಆರ್.ಬಿ.ಎಸ್-45
HBA1C-30
ಲಿಪಿಡ್ ಪ್ರೊಫೈಲ್-20
ಸ್ಪೈರೋಮೆಟ್ರಿ-15
ನ್ಯುರೋಪತಿ-25 ಮಂದಿ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರು.