ಪ್ರಗತಿ ಸ್ಟಡಿ ಸೆಂಟರ್ “ಅಷ್ಟಾದಶ ಸಂಗಮ” 18ನೇ ವರ್ಷಕ್ಕೆ ದಾಪುಗಾಲು

0


ಪುತ್ತೂರು: ಪುತ್ತೂರಿನ ಹೃದಯ ಭಾಗದ ಶ್ರೀ ಧರ್ಮಸ್ಥಳ ಕಟ್ಟಡದ 2ನೇ ಮಹಡಿಯಲ್ಲಿ ಕಾರ‍್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಮೊಗದಲ್ಲಿ ಹೊಸ ಮಂದಹಾಸ ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಾಂತ ಹೆಸರುವಾಸಿಯಾಗಿದೆ. ಇಲ್ಲಿ ಹತ್ತನೇ ತರಗತಿ, ದ್ವಿತೀಯ ಪಿಯುಸಿಯ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗ, ಕಂಪ್ಯೂಟರ್ ತರಗತಿ, C.E.T, NEET ತರಗತಿ, ಜವಾಹರ್ ನವೋದಯ ತರಬೇತಿ, NMMS, NTSE ತರಬೇತಿ, ೧ರಿಂದ ಪದವಿಯವರಿಗೆ ಟ್ಯೂಷನ್ ತರಗತಿ ಹೀಗೆ ಹಲವಾರು ತರಗತಿಗಳನ್ನು ನೀಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಾ ಪುಟ್ಟ ಪುಟ್ಟ ಹೆಜ್ಜೆಯ ಮೂಲಕ 18ನೇ ವರ್ಷದ “ಅಷ್ಟಾದಶ ಸಂಗಮ” ಸ್ಥಾಪಕ ದಿನಾಚರಣೆಯು ಆ.18ರ ಭಾನುವಾರದಂದು ನಡೆಯಲಿದೆ. ಕಾರ‍್ಯಕ್ರಮದ ಉದ್ಘಾಟಣೆಯನ್ನು ಆಶಾ ಬೆಳ್ಳಾರೆ ಮುಖ್ಯೋಪಾಧ್ಯಾಯರು ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ ತೆಂಕಿಲ ಪುತ್ತೂರು ಇವರು ನೆರವೇರಿಸಲಿದ್ದಾರೆ.


ಕಾರ‍್ಯಕ್ರಮದ ಸಭಾಧ್ಯಕ್ಷತೆಯನ್ನು ಗೋಕುಲ್‌ನಾಥ್ ಪಿ.ವಿ. ಸ್ಥಾಪಕಾಧ್ಯಕ್ಷರು ಪ್ರಗತಿ ಎಜುಕೇಶನ್ ಫೌಂಡೇಶನ್(ರಿ.) ಇವರು ವಹಿಸಿಕೊಳ್ಳಲಿದ್ದಾರೆ. ಕಾರ‍್ಯಕ್ರಮದ ಮುಖ್ಯ ಅತಿಥಿಗಳಾಗಿ ಸುದರ್ಶನ್ ಮೂಡಬಿದ್ರೆ ಮಾಜಿ ಜಿಲ್ಲಾಧ್ಯಕ್ಷರು ಭಾರತೀಯ ಜನತಾ ಪಾರ್ಟಿ ದ.ಕ., ನಾರಾಯಣ ರೈ ಕುಕ್ಕುವಳ್ಳಿ ನಿವೃತ್ತ ಶಿಕ್ಷಕರು, ರಾಜ್ಯ ಪ್ರಶಸ್ತಿ ಪುರಸ್ಕರ ಸಾಹಿತಿ, ಬರಹಗಾರರು, ಪ್ರಧಾನ ಸಂಪಾದಕರು, ಮಧುಪ್ರಪಂಚ, ಅಂಕಣಗಾರರು ಪ್ರತಿಭಾರಂಗ ಇವರು ವಹಿಸಲಿದ್ದಾರೆ. ಪರಶುರಾಮ ಲದ್ವಾ (ಚಿತ್ರಕಲಾ ಶಿಕ್ಷಕರು ಸರಕಾರಿ ಪದವಿಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) ಕೊಂಬೆಟ್ಟು ಹಾಗೂ ಕು. ಅಕ್ಷಿತಾ ಎಂ. ಕೆ. ಕೊಡಗು (ಹಿರಿಯ ವಿದ್ಯಾರ್ಥಿನಿ 2016-17) Siemens Technology As Senior Operation ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಗುವುದು. ತದನಂತರ ವಿಠಲ್ ನಾಯಕ್ ಕಲ್ಲಡ್ಕ ಇವರಿಂದ ಗೀತ ಸಾಹಿತ್ಯ ವೈವಿಧ್ಯ ಎಂಬ ವಿನೂತನ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಹೇಮಲತಾ ಗೋಕುಲ್‌ನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here