ಪುತ್ತೂರು: 78ನೇಯ ಸ್ವಾತಂತ್ರ ದಿನಾಚರಣೆಯನ್ನು ನಂದನ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ, ನಂದನ ಪುತ್ತೂರು ಚಿಟ್ಸ್ ಪ್ರೈ. ಲಿಮಿಟೆಡ್ ಮತ್ತು ಹೆಗ್ಡೆ ಆರ್ಕೆಡ್ ನ ವ್ಯಾಪಾರಸ್ಥರ ಸಹಯೋಗದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಾಗೂ ದ್ವಜಾರೋಹಣ ಕಾರ್ಯಕ್ರಮವನ್ನು ನಿವೃತ್ತಿ ಸೇನಾಧಿಕಾರಿ ರಘುರಂ ನೆರವೇರಿಸಿ ಶುಭಹಾರೈಸಿದರು ಮತ್ತು ಇವರಿಗೆ ಸ್ಕೌಟ್ ಅಂಡ್ ಗೈಡ್ಸ್ ನ ವಿದ್ಯಾರ್ಥಿ ಗುರುಪ್ರಸಾದ್ ಸಹಕರಿಸಿದರು . ಈಶ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಗೋಪಾಲ ಕೃಷ್ಣ ಎಮ್ ಸ್ವಾತಂತ್ರೋತ್ಸವ ದ ಪ್ರಾಮುಖ್ಯತೆ ಯನ್ನು ಮತ್ತು ದೇಶದ ಉತ್ತಮ ಚಿಂತನೆಯ ಬಗ್ಗೆ ಒಳ್ಳೆಯ ಸಂದೇಶವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ನಂದನ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಮತ್ತು ನಂದನ ಪುತ್ತೂರು ಚಿಟ್ಸ್ ಪ್ರೈ. ಲಿ ನ ನಿರ್ದೇಶಕರಾದ ಸಂದೀಪ್ ಶಂಕರ್, ದಿನೇಶ್ ಕುಮಾರ್ ಎಚ್ ಜಿ, ಲಾರೆನ್ಸ್ ಎ ಪಿಂಟೋ, ಶ್ರೀ ಲತಾ ಎಸ್ ರೈ ಹಾಗೂ ಸಿಬ್ಬಂದಿಗಳಾದ ಹರಿಪ್ರಿಯಾ,ಮೋಹಿನಿ, ಪ್ರೇಮಲತಾ ಮತ್ತು ಸುದ್ದಿ ಬಿಡುಗಡೆ ದಿನಪತ್ರಿಕೆಯ ಶ್ರೀಧರ ರೈ ಇವರು ಉಪಸ್ಥಿತರಿದ್ದರು.
ನಂದನ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಉಪಾಧ್ಯಕ್ಷ ದಾಮೋದರ್ ಎಸ್ ಸ್ವಾಗತಿಸಿ, ನಂದನ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಮುಖ್ಯ ಕಾರ್ಯ ನಿರ್ವಹಣಧಿಕಾರಿ ಸೋಮಶೇಖರ್ ಎಮ್ ವಂದಿಸಿದರು.
ಹೆಗ್ಡೆ ಆರ್ಕೆಡ್ ನ ವ್ಯಾಪಾರಿಗಳಾದ ಸೋಜಾ ಮೆಟಲ್,ಎಮ್ ಚಂದು ಶೆಟ್ಟಿ, ಸುಪ್ರೀಂ ಪ್ಲಾಸ್ಟಿಕ್, ಡಿಬಿಸಿ, ಅರುಣ್ ಇಂಡಸ್ಟ್ರಿಯಲ್ ಪ್ರಾಡಕ್ಟ್, ಆರ್ ಕೆ ಜ್ಯುವೆಲ್,ಪ್ರೊಫೆಷನಲ್ ಕೊರಿಯರ್, ವಿವೇಕ್ ಸ್ಟೋರ್,ಶೆಣೈ ಬ್ರದರ್, ಆಶ್ಲೇಷ ಜ್ಯುವೆಲರಿ, ವಿವೇಕ್ ಸ್ಟೋರ್,ಫೈವ್ ಸ್ಟಾರ್ , ನಂದನ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ, ನಂದನ ಪುತ್ತೂರು ಚಿಟ್ಸ್ ಪ್ರೈ. ಲಿ, ಪರಮ್ ಕಂಪ್ಯೂಟರ್, ವಿಭಾ ಫ್ಯಾಷನ್, ಇ ಏನ್ ಟಿ ಕ್ಲಿನಿಕ್ ,ಉದ್ಭವ್ ಕನ್ಸ್ಟ್ರಕ್ಷನ್ ಶುಭಹಾರೈಸಿದರು.