ಬಟ್ಟೆಗಳ ಹೋಲ್ ಸೇಲ್ ಮಾರಾಟ ಮಳಿಗೆ | ಧಾರ್ಮಿಕ ಕಾರ್ಯಕ್ಕೂ ಕೂಡ ವಿಶೇಷ ದರ

0

ವರಮಹಾಲಕ್ಷ್ಮೀ ಹಬ್ಬಕ್ಕೆ ” ವಸ್ತ್ರ ಮನೆ ” ಮಳಿಗೆಯಲ್ಲಿ ವಿಶೇಷ ರಿಯಾಯಿತಿ

ಪುತ್ತೂರು : 35 ವರ್ಷಗಳ ಅನುಭವದ ಜೊತೆಗೆ ಸ್ವತ ವಸ್ತ್ರ ಮನೆ ಮಿಲ್ ನಲ್ಲಿ ತಯಾರಾದಂತಹ ಯುವ ಜನತೆಯ ಸಹಿತ ಮಹಿಳೆಯರ ಮತ್ತು ಪುರುಷರ ಎಲ್ಲಾ ಬಗೆಯ ರೆಡಿಮೇಡ್ ಬಟ್ಟೆಗಳ ಮಾರಾಟ ಮಳಿಗೆ, ಇಲ್ಲಿನ ಮುಖ್ಯರಸ್ತೆ ,ದೇವಣ್ಣ ಕಿಣಿ ಸಂಕೀರ್ಣ ಇದರ ಸಮೀಪದ ರಮಾನಾಥ ಛೇಂಬರ್ಸ್ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ , ಸುಳ್ಯ ತಾಲೂಕಿನ ಪಂಜದಲ್ಲೂ ಮಳಿಗೆ ಹೊಂದಿರುವ “ವಸ್ತ್ರ ಮನೆ” ಮಳಿಗೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆಗಳು ಪ್ರಾರಂಭಗೊಂಡಿದೆ.


ಯುವತಿಯರ ಟ್ರೇಂಡಿ ವೇರ್ ಗಳು , ಮಹಿಳೆಯರ ಮೆಚ್ಚಿನ ಸೀರೆಗಳು ಜತೆಗೆ ಪುರುಷರ ಉಡುಗೆಗಳೆಲ್ಲಾವೂ ಇಲ್ಲಿ ಅತ್ಯುತ್ತಮ ಬೆಲೆಗೆ ಸಿಗಲಿವೆ. ಅತೀ ಕಡಿಮೆ ಲಾಭಂಶದೊಂದಿಗೆ , ಗುಣಮಟ್ಟದ ಬಟ್ಟೆಗಳೆಲ್ಲಾ ಮಾಳಿಗೆಯಲ್ಲಿ ಲಭ್ಯವಿದ್ದು , ಮಳಿಗೆಯಿಂದ ಹೋಲ್ ಸೇಲ್ ದರದಲ್ಲೂ ಬಟ್ಟೆಗಳು ಗ್ರಾಹಕರು ಮತ್ತು ಮಾರಾಟಗಾರರಿಗೂ ಕೂಡ ಸದಾ ಲಭ್ಯವಿದೆ.


ಧಾರ್ಮಿಕ ಕಾರ್ಯಕ್ರಮಗಳಿಗೆ ಬೇಕಾಗುವಂತಹ ವಿವಿಧ ಬಣ್ಣಗಳ ಬಟ್ಟೆಗಳು , ಪುರೋಹಿತ ವರ್ಗಕ್ಕೆ ಬೇಕಾಗುವ ಪ್ಯೂರ್ ಕಾಟನ್ ಬಟ್ಟೆಗಳು , ಸೊಲಾಪುರ್ ಚಾದರ್ ಸಹಿತ ಹಲವು ಮಾದರಿಯ ತೊಡುಗೆಗಳೆಲ್ಲಾ ಇಲ್ಲಿ ಊಹಿಸಿಲಾರದ ಬೆಲೆಯಲ್ಲಿ ಸಿಗಲಿವೆ. ಬಾಂಬೆ , ಸೂರತ್ ಮತ್ತು ಅಹಮದಬಾದ್ ನಗರದಲ್ಲೂ ವಸ್ತ್ರ ಮನೆ ಮಳಿಗೆಯ ಶಾಖೆಗಳು ಉತ್ತಮ ರೀತಿಯಲ್ಲಿ ವ್ಯವಹಾರವನ್ನು ಹೊಂದಿ, ಶಾಪಿಂಗ್ ಪ್ರಿಯರ ಮನ ಗೆದ್ದಿದೆ. ಇದೀಗ ಪುತ್ತೂರಿನಲ್ಲೂ ತನ್ನ ವಿಶೇಷ ರಿಯಾಯಿತಿ ಕೊಡುಗೆ ಘೋಷಣೆ ಮಾಡಿದ್ದು , ಶಾಪಿಂಗ್ ಪ್ರಿಯರು ಈ ಕೊಡುಗೆಗಳ ಲಾಭ ಪಡೆಯುವಂತೆ ಮಾಲೀಕರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here