ಕೊಪ್ಪ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

0

ಕಾಣಿಯೂರು : ಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣ ಮಾಡಿದ ಎಸ್ ಡಿ ಎಂ ಅಧ್ಯಕ್ಷರಾದ ಸೀತಾರಾಮ ಕೊಪ್ಪರವರು ಮಾತನಾಡಿ, ನಮ್ನ ದೇಶದ ಸಾರ್ವಭೌಮತೆಯನ್ನು ಎತ್ತಿ ಹಿಡಿದು ನಾವೆಲ್ಲ ದೇಶವನ್ನು ಅಭಿವೃದ್ಧಿಯತ್ತ ಕೊಂಡುಹೋಗಲು ಸಹಕಾರ ನೀಡಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯ ಕುಮಾರ್ ಸೊರಕೆಯವರು ಮಾತನಾಡುತ್ತ ದೇಶದ ಅಭಿವೃದ್ದಿಗೆ ನಾವೆಲ್ಲರೂ ಓಗ್ಗಟ್ಟಾಗಿ ಸೇರಬೇಕು, ದೇಶದ ಅಖಂಡಂತೆಯನ್ನು ಎತ್ತಿ ಹಿಡಿದು ದೇಶ ಸೇವೆಗೆ ಸಣ್ಣದ್ದರಾಗಬೇಕು ಎಂದರು. ಊರಿನ ಹಿರಿಯರಾದ ಮೋನಪ್ಪ ಗೌಡ ಉಳವ, ಮಾಜಿ ಎಸ್ ಡಿ ಎಂ ಸಿ ಉಪಾಧ್ಯಕ್ಷ ಶ್ರೀ ಮನೋಜ್ ಕೊಪ್ಪ ಸಭೆಯಲ್ಲಿ ಉಪಸ್ಥಿತರಿದ್ದರು. ಊರಿನ ಹಿರಿಯರು, ಸ್ವಸಹಾಯ ಸಂಘದ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶಾಲಾ ಮುಖ್ಯಗುರು ನಾರಾಯಣ ಡಿ ಪುಣಚ ಸ್ವಾಗತಿಸಿ, ಶಿಕ್ಷಕಿ ಕುಮಾರಿ ಹವ್ಯ ವಂದಿಸಿದರು. ಅತಿಥಿ ಶಿಕ್ಷಕ ಸುರೇಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here