ಸವಣೂರು: ವಿದ್ಯಾರಶ್ಮಿಯಲ್ಲಿ 78ನೆ ಸ್ವಾತಂತ್ರ್ಯೋತ್ಸವ

0


ಸವಣೂರು: ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಚರಿಸಲಾದ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಂಸ್ಥೆಯ ಸಂಚಾಲಕ ಸಹಕಾರಿ ರತ್ನ ಸವಣೂರು ಸೀತಾರಾಮ ರೈ ಅವರು ಧ್ವಜಾರೋಹಣಗೈದರು. ಬಳಿಕ ಮಾತನಾಡಿದ ಅವರು ಸ್ವಾತಂತ್ರ್ಯಕ್ಕೆ ಕಾರಣರಾದ ನಮ್ಮ ಹೋರಾಟಗಾರರನ್ನು ಮತ್ತು ಬಲಿದಾನ ಮಾಡಿದವರನ್ನು ಸದಾ ನಾವು ಸ್ಮರಿಸಿಕೊಳ್ಳಬೇಕು. ಅವರ ಸಾರ್ಥಕ ಶ್ರಮವನ್ನು ಉಳಿಸಿಕೊಳ್ಳಲು ನಾವು ಪರಿಸರ ಸಂರಕ್ಷಣೆಯಂತಹ ವಿವಿಧ ಕೆಲಸಗಳನ್ನು ಮಾಡಿ ದೇಶವನ್ನು ಸಶಕ್ತವಾಗಿಸಲು ನಮ್ಮ ಕೊಡುಗೆಯನ್ನು ನೀಡಬೇಕು ಎಂದು ಕರೆಯಿತ್ತರು.
ಇದೇ ಸಂದರ್ಭದಲ್ಲಿ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ 10ನೆ ತರಗತಿಯ ವಿಘ್ನೇಶ್ ಮತ್ತು 8ನೇ ತರಗತಿಯ ಹೃತೇಶ್, ದ್ವಿತೀಯ ಸ್ಥಾನ ಗಳಿಸಿದ 10ನೇ ತರಗತಿಯ ವಿದಿಶಾ, 8ನೇ ತರಗತಿಯ ಕಿರಣ್ ಇವರನ್ನು ಸಂಚಾಲಕರು ಗೌರವಿಸಿದರು. ಚೆಸ್ ಪಂದ್ಯಾಟದಲ್ಲಿ ವಲಯ ಮಟ್ಟದಿಂದ ತಾಲೂಕು ಮಟ್ಟಕ್ಕೆ ಆಯ್ಕೆಯಾದ 10ನೇ ತರಗತಿಯ ಪವನ್ ಗೌಡ ಇವರನ್ನು ಆಡಳಿತಾಧಿಕಾರಿ ಇಂಜಿನಿಯರ್ ಅಶ್ವಿನ್ ಎಲ್. ಶೆಟ್ಟಿ ಅವರು ಗೌರವಿಸಿದರು.

ಸಂಸ್ಥೆಯ ಪ್ರಾಂಶುಪಾಲರುಗಳಾದ ಡಾ. ನಾರಾಯಣ ಮೂರ್ತಿ, ಸೀತಾರಾಮ ಕೇವಳ ಮತ್ತು ಶಶಿಕಲಾ ಎಸ್. ಆಳ್ವ ಹಾಗೂ ಸರ್ವ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. 10ನೇ ತರತಿಯ ಅಭಿಷೇಕ್ ಗೌಡ ಕಮಾಂಡರ್ ಆಗಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಕೆ. ಯಶಸ್ವಿ ರೈ ಸ್ವಾಗತ ಮತ್ತು ದ್ವಿತೀಯ ಬಿ.ಕಾಂ.ನ ಅಲೀಮತ್ ಸಝಾನಾ ಅವರು ಧನ್ಯವಾದ ಸಮರ್ಪಿಸಿದರು. ಶಿಕ್ಷಕಿ ಆಶಾಲತಾ ಎಂ. ಅವರು ಬಹುಮಾನ ವಿಜೇತರ ಪಟ್ಟಿ ವಾಚಿಸಿ ಶ್ರುತಾ ಜೈನ್ ಮತ್ತು ಬಳಗದವರು ಧ್ವಜ ಗೀತೆ ಮತ್ತು ರಾಷ್ಟ್ರಗೀತೆಗಳನ್ನು ಹಾಡಿದರು. ಬಳಿಕ ವಿದ್ಯಾರ್ಥಿ-ವಿದ್ಯಾಥಿನಿಯರಿಂದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅರ್ಥಪೂರ್ಣ ಮನರಂಜನ ಕಾರ್ಯಕ್ರಮಗಳು ನಡೆದವು.

LEAVE A REPLY

Please enter your comment!
Please enter your name here