ಪರ್ಲಡ್ಕ: ಜಮೀಲ ಸನಿಕ ಮೆಮೋರಿಯಲ್ ಅಲ್ ಬಿರ್ರ್ ಸ್ಕೂಲ್’ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ಪುತ್ತೂರು: ಜಮೀಲ ಸನಿಕ ಮೆಮೋರಿಯಲ್ ಅಲ್ ಬಿರ್ರ್ ಸ್ಕೂಲ್ ಪರ್ಲಡ್ಕ ಇಲ್ಲಿ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ನಡೆಯಿತು.

ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ಹಸನ್ ಹಾಜಿ ಸಿಟಿ ಬಜಾರ್ ಧ್ವಜಾರೋಹಣ ನಡೆಸಿದರು. ಅಧ್ಯಕ್ಷ ಇಬ್ರಾಹಿಂ ಬಾತಿಷ ಹಾಜಿ ಪಾಟ್ರಕೋಡಿ ಅಧ್ಯಕ್ಷತೆ ವಹಿಸಿದ್ದರು..
ಕೆ ಐ ಸಿ ಕುಂಬ್ರ ಇದರ ಪ್ರಾಧ್ಯಾಪಕ ಅನೀಸ್ ಕೌಸರಿ ವೀರಮಂಗಳ ಸಂದೇಶ ಭಾಷಣ ಮಾಡಿದರು. ಶಾಲಾ ಆಡಳಿತ ಮಂಡಳಿ ಕೋಶಾಧಿಕಾರಿ ಸೈಯ್ಯದ್ ಅಫ್ಹಾಂ ತಂಙಳ್ ಪುತ್ತೂರು ದುಆ ನೆರವೇರಿಸಿದರು. ಬಳಿಕ ಶಾಲಾ ಮಕ್ಕಳಿಗೆ ವಿವಿಧ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ ಕೂರ್ನಡ್ಕ, ಪೋಷಕರಾದ ಅಬ್ದುಲ್ ರಹಿಮಾನ್ ಹಾಜಿ ಬಾಳಾಯ, ಅಬ್ದುಲ್ ಕರೀಂ ದಾರಿಮಿ ಕುಂಬ್ರ , ಅನ್ವರ್ ಸಾದಿಕ್ ಮೌಲವಿ ಮೊಟ್ಟೆತ್ತಡ್ಕ , ಶರೀಫ್ ಹಾಜಿ ಕೊಡಾಜೆ, ರಫೀಕ್ ರೋಯಲ್ ದರ್ಬೆ ಮೊದಲಾದವದು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ತಸ್ಲೀಮಾ ಶಿಕ್ಷಕಿಯರಾದ ಹಸೀನಾ, ಝುಬೈದಾ, ತಸ್ಲೀಮಾ, ಮುಫೀದಾ , ತೌಫಿರಾ, ಫಾರಿಶಾ ವಿವಿಧ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಉಮ್ಮರ್ ಶಾಫಿ ಪಾಪೆತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.
ಕೋರ್ಡಿನೇಟರ್ ಯೂಸುಫ್ ಮುಂಡೋಳೆ ವಂದಿಸಿದರು.

LEAVE A REPLY

Please enter your comment!
Please enter your name here