ಮೊಗರು ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಸವಣೂರು : ಇಲ್ಲಿನ  ಮೊಗರು ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನುಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಫೀಕ್ ಎಂ. ಎ ನೆರವೇರಿಸಿದರು. 

ಪ್ರಭಾರ ಮುಖ್ಯಗುರು ಜುಸ್ತಿನಾ ಲಿಡ್ವಿನ್ ಡಿಸೋಜ, ಗ್ರಾ. ಪಂ.ಸದಸ್ಯರಾದ ಅಬ್ದುಲ್ ರಜಾಕ್ ಕೆನರಾ,  ಬಾಬು ಸವಣೂರು,ಚೆನ್ನು,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಹಾಜಿ,ಉಪಾಧ್ಯಕ್ಷ  ಝಕರಿಯ ಮಾಂತೂರು, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷರಾದ ದಿವ್ಯಲತಾ, SYS ಹಾಗೂ SSF, ಸಂಘದ ಪದಾಧಿಕಾರಿಗಳು, ಶಾಲಾಭಿವೃದ್ದಿ ಸಮಿತಿ ಸದಸ್ಯರುಗಳು, ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಅಂಗನವಾಡಿ ಸಹಾಯಕಿ,ಊರ ವಿದ್ಯಾಭಿಮಾನಿಗಳು, ಪೋಷಕರು, ವಿದ್ಯಾರ್ಥಿಗಳು, ಅಂಗನವಾಡಿ ಪುಟಾಣಿಗಳು ಉಪಸ್ಥಿತರಿದ್ದರು. ಶಿಕ್ಷಕರಾದ ಸವಿತಾ ಹಾಗೂ  ಜಾನಕಿ ಕಾರ್ಯಕ್ರಮ ನಿರೂಪಿಸಿದರು.ದಯಾಮಣಿ ವಂದಿಸಿದರು.ಗುಲ್ಸನ್ ಕೌಸರ್, ಶ್ವೇತಾ  ಸಹಕರಿಸಿದರು.

LEAVE A REPLY

Please enter your comment!
Please enter your name here