ವಿಟ್ಲ: ಕಾರೊಂದು ರಸ್ತೆ ಬದಿಯ ಅಂಗಡಿಗೆ ನುಗ್ಗಿದ ಪರಿಣಾಮ ಅಂಗಡಿ ಸಂಪೂರ್ಣ ಜಖಂಗೊಂಡ ಘಟನೆ ವಿಟ್ಲ ಸಮೀಪದ ಕಾಶಿಮಠ ಎಂಬಲ್ಲಿ ಅ.15ರಂದು ರಾತ್ರಿ ನಡೆದಿದೆ.
ಉಕ್ಕುಡ ಭಾಗದಿಂದ ಬಂದ ಕಾರೊಂದು ಕಾಶಿಮಠ ತಲುಪುತ್ತಿದ್ದಂತೆ ರಸ್ತೆ ಬಲಭಾಗದಲ್ಲಿದ್ದ ಅಂಗಡಿಗೆ ನುಗ್ಗಿದೆ. ಘಟನೆಯಿಂದಾಗಿ ಅಂಗಡಿ ಸಂಪೂರ್ಣ ಜಖಂಗೊಂಡಿದ್ದು, ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ.
ಕಾರಿನಲ್ಲಿ ನಾಲ್ವರು ಯವಕರಿದ್ದ ಈ ಪೈಕಿ ಓರ್ವನಿಗೆ ಗಾಯವಾಗಿದೆ ಎಂದು ಮಾಹಿತಿ ಲಭಿಸಿದೆ. ಕಾರಿನ ಚಾಲಕ ಮಧ್ಯಪಾನ ಮಾಡಿ ಚಾಲನೆ ಮಾಡಿರುವುದೇ ಘಟನೆಗೆ ಕಾರಣವಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.