ಪಾಂಗ್ಲಾಯಿ ಬೆಥನಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ಪುತ್ತೂರು : 78 ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಇಲ್ಲಿನ ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಆಚರಣೆ ಮಾಡಲಾಯಿತು. ಮಾಜಿ ಯೋಧ , ಪ್ರಸ್ತುತ ಯೂನಿಯನ್ ಬ್ಯಾಂಕ್ ಉದ್ಯೋಗಿ ಸುಬ್ಬಪ್ಪ ಪಾಟಾಳಿ ಧ್ವಜಾರೋಹಣ ನೆರವೇರಿಸಿ ,ಶುಭ ಹಾರೈಸಿದರು.


ಈ ವೇಳೆ ಶಾಲಾ ರಕ್ಷಕ ಶಿಕ್ಷಕ ಮಂಡಳಿ ಇದರ ಉಪಾಧ್ಯಕ್ಷ ರಘುನಾಥ ರೈ ಹಾಗೂ ಮಂಗಳೂರು ಪಿ.ಎ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಇಸ್ಮಾಯಿಲ್ ಶಫಿ ಸಹಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಆಗ್ನೇಶ್ ಶಾಂತಿ , ಪ್ರಾರ್ಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಸೆಲಿನ್ ಪೆತ್ರವೋ , ಶಿಕ್ಷಕ ವೃಂದ , ವಿದ್ಯಾರ್ಥಿ ವೃಂದ ಮತ್ತು ಸಿಬಂದಿ ವರ್ಗದವರು ಇದ್ದರು.

LEAVE A REPLY

Please enter your comment!
Please enter your name here