ದರ್ಬೆತ್ತಡ್ಕ ಶಾಲೆಯಲ್ಲಿ 78 ನೇ ಸ್ವಾತಂತ್ರ್ಯೋತ್ಸವ ಆಚರಣೆ

0

ನಿಡ್ಪಳ್ಳಿ; ದ ಕ ಜಿ ಪಂ ಉನ್ನತ ಹಿರಿಯ ಪ್ರಾಥಮಿಕ ಶಾಲೆ ದರ್ಬೆತ್ತಡ್ಕ ಇಲ್ಲಿ  78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಧ್ವಜಾರೋಹಣ ನೆರವೇರಿಸಿದರು.   

 ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯರಾದ  ರೇಖಾ ಬಿಜತ್ರೆ, ಶಾರದ, ಪ್ರದೀಪ್  ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷ ಕೊರಗಪ್ಪ ನಾಯ್ಕ, ಉಪಾಧ್ಯಕ್ಷೆ ಸಹನಾಕುಮಾರಿ ಹಾಗೂ ಸದಸ್ಯರು ಮತ್ತು  ಬಾಲಕೃಷ್ಣ ಗೋವಿಂದ ಮೂಲೆ, ಪೋಷಕರು ಮತ್ತು ಶಿಕ್ಷಣ ಪ್ರೇಮಿಗಳು ಅಧ್ಯಾಪಕ ವೃಂದದವರು,ಅಕ್ಷರ ದಾಸೋಹದ ಸಿಬ್ಬಂದಿಗಳು ಭಾಗವಹಿಸಿದ್ದರು.ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಅತಿಥಿ ಶಿಕ್ಷಕಿ ಕು. ಚೈತ್ರಾ ಕಾರ್ಯಕ್ರಮ ನಿರ್ವಹಿಸಿ,  ಯೋಗಿನಿ ಸ್ವಾಗತಿಸಿ, ಜ್ಞಾನದೀಪ ಶಿಕ್ಷಕಿ ಕು. ಜ್ಯೋತಿ ವಂದಿಸಿದರು. ಕು. ಅಶ್ವಿತಾ ಮತ್ತು ಶಿಕ್ಷಕ ರಾಜು ಎಸ್. ಟಿ ಸಹಕರಿಸಿದರು.

LEAVE A REPLY

Please enter your comment!
Please enter your name here