ನೆಲ್ಯಾಡಿ: ಅಪ್ಪಿ ಬಾಣಜಾಲುರವರ ವೈಕುಂಠ ಸಮಾರಾಧನೆ, ನುಡಿನಮನ

0

ಕಾಯಕ್ಕಿಂತ ಕಾಯಕ ಮುಖ್ಯ: ಗುಡ್ಡಪ್ಪ ಬಲ್ಯ

ನೆಲ್ಯಾಡಿ: ಆ.3ರಂದು ನಿಧನರಾದ ಕೌಕ್ರಾಡಿ ಗ್ರಾಮದ ಬಾಣಜಾಲು ನಿವಾಸಿ ಅಪ್ಪಿ ಬಾಣಜಾಲು ಅವರ ವೈಕುಂಠ ಸಮಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮ ಆ.15ರಂದು ನೆಲ್ಯಾಡಿ ಹೊಸಮಜಲು ಬಿರ್ವ ಆಡಿಟೋರಿಯಂನಲ್ಲಿ ನಡೆಯಿತು.


ಬಾಣಜಾಲು ಬಂಗೇರ ಕುಟುಂಬದ ಮುಖ್ಯಸ್ಥರಾದ ಕೊರಗಪ್ಪ ಪೂಜಾರಿ ಪೆರ್ನೆ ದೀಪ ಬೆಳಗಿಸಿದರು. ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಉಪನ್ಯಾಸಕ ಗುಡ್ಡಪ್ಪ ಬಲ್ಯ ಅವರು ಮಾತನಾಡಿ, ಮೃನ್ಮಯ ಶರೀರಕ್ಕಿಂತ ಆ ಶರೀರ ಇರುವಾಗ ಮಾಡಿದ ಕೆಲಸ ಮುಖ್ಯವಾದುದು. ಅದು ದೇಹ ಅಳಿದ ಮೇಲೂ ನೆನಪಲ್ಲಿ ಉಳಿಯುತ್ತದೆ. ಮಾನವ ದೇಹ ನಶ್ವರ. ಸಾವು ದೇಹಕ್ಕೆ ಮಾತ್ರ. ಆತ್ಮಕ್ಕೆ ಸಾವು ಇಲ್ಲ. ಆತ್ಮ ಹುಟ್ಟುವುದೂ ಇಲ್ಲ ಹಾಗಾಗಿ ಸಾಯುವುದೂ ಇಲ್ಲ ಎಂದು ಹೇಳಿದ ಅವರು, ಅಪ್ಪಿ ಅವರು ಓರ್ವ ಆದರ್ಶ ಮಹಿಳೆಯಾಗಿ, ಆದರ್ಶ ತಾಯಿಯಾಗಿ, ಆದರ್ಶ ಗೃಹಿಣಿಯಾಗಿ ಬದುಕಿದವರು. ಅಗಲಿದ ಅವರ ಆತ್ಮಕ್ಕೆ ಸಾಯುಜ್ಯ ಪ್ರಾಪ್ತಿಯಾಗಿ ಚಿರಶಾಂತಿ ದೊರೆಯಲಿ ಎಂದು ಹೇಳಿದರು. ಬಳಿಕ 1 ನಿಮಿಷ ಮೌನ ಪ್ರಾರ್ಥನೆ ಮಾಡಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.


ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಜಿ.ಪಂ.ಮಾಜಿ ಸದಸ್ಯರಾದ ಕೃಷ್ಣ ಶೆಟ್ಟಿ ಕಡಬ, ಸರ್ವೋತ್ತಮ ಗೌಡ ನೆಲ್ಯಾಡಿ, ಪಿ.ಪಿ.ವರ್ಗೀಸ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಅರಣ್ಯ ನಿಗಮದ ಮಾಜಿ ಅಧ್ಯಕ್ಷ ಮನ್ಮಥ ಸುಳ್ಯ, ಪುತ್ತೂರು ಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧರ್ಮಪಾಲ ರಾವ್, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಕೌಕ್ರಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಕೆ.ಇಬ್ರಾಹಿಂ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಯಾಕೂಬ್ ಯಾನೆ ಸಲಾಂ ಬಿಲಾಲ್, ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಜಯಾನಂದ ಬಂಟ್ರಿಯಾಲ್, ತಾ.ಪಂ.ಮಾಜಿ ಸದಸ್ಯ ದಯಾನಂದ ಆಲಡ್ಕ, ತುಕ್ರಪ್ಪ ಶೆಟ್ಟಿ ನೂಜೆ, ರಮೇಶ್ ಶೆಟ್ಟಿ ಬೀದಿ, ಅಣ್ಣಿ ಎಲ್ತಿಮಾರ್ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮೃತರ ಪುತ್ರರಾದ ಜನಾರ್ದನ ಬಾಣಜಾಲು, ಸುಂದರ ಬಾಣಜಾಲು, ಮೋಹನ ಬಾಣಜಾಲು, ದೇವದಾಸ್ ಬಾಣಜಾಲು, ಬಾಲಕೃಷ್ಣ ಬಾಣಜಾಲು, ಲೋಕೇಶ್ ಬಾಣಜಾಲು, ಜಯರಾಮ ಬಾಣಜಾಲು, ಪುತ್ರಿಯರಾದ ಪುಷ್ಪಲತಾ, ಮೋಹಿನಿ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಅತಿಥಿಗಳನ್ನು ಸತ್ಕರಿಸಿದರು.

LEAVE A REPLY

Please enter your comment!
Please enter your name here