ಪುತ್ತೂರು: ಪುತ್ತೂರು ತಿಂಗಳಾಡಿ ಕ್ಲಬ್ ನ 2024-25ನೇ ಸಾಲಿನ ಅಧ್ಯಕ್ಷರಾಗಿ ಮನ್ವಿತ್ ರೈ ಬಾಕುಡ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಕಿರಣ್ ರೈ ಬಿ, ಜೊತೆಕಾರ್ಯದರ್ಶಿಯಾಗಿ ಪ್ರೀತಂ ಶೆಟ್ಟಿ,ಕೋಶಾಧಿಕಾರಿಯಾಗಿ ಕೃತಿಕ್ ರೈ ಮತ್ತು ಸಭಾಪತಿಯಾಗಿ ಶರತ್ ಗೌಡ ಜಿ ಆಯ್ಕೆಯಾಗಿದ್ದಾರೆ. ಕ್ಲಬ್ ಸಲಹೆಗಾರರಾಗಿ ಹರೀಶ್ ರೈ ಎಂ,ಅನೀಶ್ ಶೆಟ್ಟಿ ಮತ್ತು ಲೋಹಿತ್ ಗೌಡ ಜಿ, ದಂಡಾಧಿಕಾರಿಯಾಗಿ ಅಮೋಘ್ ರಾವ್, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಸ್ನೇಹಿತ್ ರೈ,ಸಮುದಾಯ ಸೇವಾ ವಿಭಾಗದ ನಿರ್ದೇಶಕರಾಗಿ ಪ್ರದ್ವಿನ್ ರೈ ಕೆ,ವೃತ್ತಿ ಸೇವಾ ವಿಭಾಗದ ನಿರ್ದೇಶಕರಾಗಿ ಅರುಣ್ ರೈ ಬಿ, ಅಂತರಾಷ್ಟ್ರೀಯ ವಿಭಾಗದ ನಿರ್ದೇಶಕರಾಗಿ ಧನುಷ್ ರೈ ಬಾಕುಡ, ಕ್ರೀಡಾ ಕಾರ್ಯದರ್ಶಿಯಾಗಿ ಸ್ವರೂಪ್ ಯಸ್ ರೈ, ಸಾಂಸ್ಕೃತಿಕ ಸೇವಾ ನಿರ್ದೇಶಕರಾಗಿ ಅಕ್ಷತ್ ರೈ ಸಿ. ಆಯ್ಕೆಯಾಗಿದ್ದಾರೆ.
ಇಂದು ಸಂಜೆ 6.30ಕ್ಕೆ ತಿಂಗಳಾಡಿಯ ಪಂಚಾಯತ್ ಸಭಾಂಗಣದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.