ಬೆಟ್ಟಂಪಾಡಿ: ಪ್ರಿಯದರ್ಶಿನಿ ವಿದ್ಯಾ ಸಂಸ್ಥೆ ಬೆಟ್ಟಂಪಾಡಿ ಆ.16ರಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರಕಾರಿ ಪ್ರಾಥಮಿಕ ಶಾಲೆ ಕುಂಬ್ರ ಇಲ್ಲಿಯ ನಿವೃತ್ತ ಶಿಕ್ಷಕಿಯಾದ ಶ್ರೀಮತಿ ಶಾರದ ಇವರು ವರಮಹಾಲಕ್ಷ್ಮಿ ವ್ರತಾಚರಣೆ, ಮಗಳಾಗಿ ಸೊಸೆಯಾಗಿ, ತಾಯಿಯಾಗಿ ಹೆಂಡತಿಯಾಗಿ ,ಹೆಣ್ಣಿನ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಮಾರ್ಮಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ವಿಶೇಷ ಆಹ್ವಾನಿತರಾದ ಮಾಲತಿ ಕುಕ್ಕುತ್ತಡಿ ಹಾಗೂ ಕಸ್ತೂರಿ ಕಾಯರ್ಪಪದವು ಉಪಸ್ಥಿತರಿದ್ದರು. ಮಾತಾಜಿಯವರು ಮುತ್ತೈದೆಯರಾದ ಅತಿಥಿಗಳಿಗೆ ಬಾಗಿನ ಸಮರ್ಥಿಸಿ, ಅತಿಥಿಗಳು ಮಾತಾಜಿಯವರಿಗೆ ಅರಿಶಿಣ ಕುಂಕುಮದೊಂದಿಗೆ ಬಾಗಿನ ಸಮರ್ಪಿಸಿದರು.
ಎಂಟನೇ ತರಗತಿ ವಿದ್ಯಾರ್ಥಿನಿಯರಾದ ವೃದ್ಧಿ.ಸಿ ಹಾಗೂ ಶಾರ್ವಿ ಎನ್. ರೈ ಪ್ರಾರ್ಥಿಸಿದರು ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ರಾಜೇಶ್ ಎನ್ ಸ್ವಾಗತಿಸಿ, ಸಹಶಿಕ್ಷಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು.