ಹಿರಿಯರು ಆಚರಣೆಗೆ ತಂದ ವಿಚಾರದಲ್ಲಿ ವೈಜ್ಞಾನಿಕತೆ ಅಡಗಿಕೊಂಡಿದೆ: ಒಡಿಯೂರು ಶ್ರೀ
ವಿಟ್ಲ: ಇಚ್ಛಾಶಕ್ತಿ, ಕ್ರೀಯಾಶಕ್ತಿ, ಜ್ಞಾನಶಕ್ತಿ ಒಟ್ಟಿಗೆ ಇದ್ದಾಗ ಯಶಸ್ಸು ಲಭಿಸುತ್ತದೆ. ಸಂಪತ್ತು ಕ್ರಿಯಾಶೀಲವಾಗಿದ್ದು, ಧರ್ಮಶ್ರದ್ಧೆಯನ್ನು ಹೊಂದಿದ ಮನೆಯಲ್ಲಿ ಲಕ್ಷ್ಮಿ ನೆಲೆಯಾಗುತ್ತಾಳೆ. ಅರ್ಪಣಾ ಭಾವನೆಯಿಂದ ನೀಡುವ ಸಂಪತ್ತು, ವೃದ್ದಿಯಾಗುತ್ತದೆ. ಹಿರಿಯರು ಆಚರಣೆಗೆ ತಂದ ವಿಚಾರದಲ್ಲಿ ವೈಜ್ಞಾನಿಕತೆ ಅಡಗಿಕೊಂಡಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಪೂಜೆಯ ಸಂದರ್ಭ ಸಂದೇಶ ನೀಡಿದರು. ಧರ್ಮಶ್ರದ್ಧೆಯಲ್ಲಿ ನಡೆಸುವ ಬದುಕಿಗೆ ಬದ್ದತೆ ಹಾಗೂ ಭದ್ರತೆಯಿದೆ. ಬದುಕಿನಲ್ಲಿ ಸಂಪತ್ತು ಮತ್ತು ಯೌವನ ಅತಿಥಿಗಳಾಗಿದ್ದು, ಫಲಾಪೇಕ್ಷೆಯಿಲ್ಲದೆ ಮಾಡುವ ಅರ್ಪಣೆ ಭಗವಂತನಿಗೆ ಪ್ರಿಯವಾಗುತ್ತದೆ. ಸಂಪತ್ತನ್ನು ಬಳಕೆ ಮಾಡಲು ಧರ್ಮದ ಶ್ರದ್ಧೆ ಬೇಕಾಗಿದ್ದು, ಇತಿಮಿತಿಯಲ್ಲಿ ಸಧ್ವಿನಿಯೋಗವಾಗಬೇಕು ಎಂದರು.
ಸಾಧ್ವಿ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು. ಚಂದ್ರಶೇಖರ ಉಪಾಧ್ಯಾಯ ನೇತೃತ್ವದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಪೂಜೆ ನಡೆಯಿತು.