ಉಪ್ಪಿನಂಗಡಿ: ಕೋಲ್ಕತ್ತಾದಲ್ಲಿ ಕರ್ತವ್ಯ ನಿರತ ವೈದ್ಯೆಯ ಅತ್ಯಾಚಾರ, ಹತ್ಯೆ ಖಂಡಿಸಿ ದೇಶವ್ಯಾಪ್ತಿಯಾಗಿ ವೈದ್ಯರು ಮುಷ್ಕರ ನಡೆಸಿದ್ದರಿಂದಾಗಿ ಪ್ರತಿನಿತ್ಯ ಹೊರರೋಗಿಗಳಿಂದ ತುಂಬಿರುತ್ತಿದ್ದ ಉಪ್ಪಿನಂಗಡಿಯ ಸಮುದಾಯ ಆರೋಗ್ಯ ಕೇಂದ್ರವು ಶನಿವಾರ ಬಿಕೋ ಎನ್ನುತ್ತಿತ್ತು.
ವೈದ್ಯರ ಮುಷ್ಕರಿಂದಾಗಿ ತುರ್ತು ಸೇವೆಗಳನ್ನು ಹೊರತು ಪಡಿಸಿ ಒಪಿಡಿ ಸೇರಿದಂತೆ ಇನ್ನಿತರ ವೈದ್ಯಕೀಯ ಸೇವೆಗಳು ಬಂದ್ ಆಗಿದ್ದವು. ಆದ್ದರಿಂದ ಆಸ್ಪತ್ರೆಯಲ್ಲಿ ಹೊರ ರೋಗಿಗಳಿಲ್ಲದೇ, ಆಸ್ಪತ್ರೆಯು ಬಿಕೋ ಎನ್ನುತ್ತಿತ್ತು.